ಬೆಂಗಳೂರು:
ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿ ನಕಲಿ ನೋಟು ತಯಾರಿಸುವ ಆರೋಪದಡಿ ಓರ್ವನನ್ನು ಅರೆಸ್ಟ್ ಮಾಡಿದ್ದಾರೆ.
ಮಹೇಂದರ್ ಬಂಧಿತ ಆರೋಪಿ. ನಕಲಿ ನೋಟು ತಯಾರಿಕೆಯ ಖಚಿತ ಮಾಹಿತಿಯನ್ನು ಆಧರಿಸಿ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಎನ್‍ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
NIA Raids Multiple Locations to Bust Fake Currency Rackets, Seizes FICN & Printing Gadgets etc. pic.twitter.com/Rbv6OmyJUT
— NIA India (@NIA_India) December 2, 2023
ಮಹೇಂದರ್ ಮನೆಯಲ್ಲೇ 500, 200, 100 ರೂ.ಮುಖಬೆಲೆಯ ನಕಲಿ ನೋಟು ತಯಾರಿಸುತ್ತಿದ್ದ ಎನ್ನಲಾಗಿದ್ದು, ನೋಟು ತಯಾರಿಸುವ ಪೇಪರ್, ಮುದ್ರಣ ಯಂತ್ರವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.