Home Uncategorized Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 29ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 29ರ ದಿನಭವಿಷ್ಯ

32
0

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 29ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ಈ ದಿನ ನಿಮಗೆ ಬಹಳ ಮೂಡ್‌ ಸ್ವಿಂಗ್‌ಗಳಿರುತ್ತವೆ. ಒಂದು ವೇಳೆ ಈಗಾಗಲೇ ಮಾನಸಿಕ ಸಮಸ್ಯೆಗಳು ಇದ್ದಲ್ಲಿ ಪರಿಸ್ಥಿತಿ ಉಲ್ಬಣಿಸುವ ಸಾಧ್ಯತೆಗಳಿರುತ್ತವೆ. ಯಾವುದಾದರೂ ನಿಯಮಿತವಾದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಅದನ್ನು ಯಾವ ಕಾರಣಕ್ಕೂ ಮರೆಯದಿರಿ. ಪ್ರಯತ್ನಪಟ್ಟಾದರೂ ಸ್ವಲ್ಪ ಸಮಯ ಧ್ಯಾನ ಮಾಡಿ.

ಜನ್ಮಸಂಖ್ಯೆ 2

ನಿಮ್ಮ ಯೋಜನೆಗಳು ಅಂದುಕೊಂಡ ರೀತಿಯಲ್ಲಿ ಮುಗಿಯಲಿದೆ. ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೆ, ಕೃಷಿಕರಿಗೆ ಉತ್ತಮವಾದ ದಿನ ಇದು. ಹೊಸಬರ ಪರಿಚಯ ಆಗಲಿದೆ. ಕೃಷಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಮುನ್ನಡೆಯಿದೆ. ರಾತ್ರಿ ಪ್ರಯಾಣ ಮಾಡುವ ಆಲೋಚನೆಯಿದ್ದಲ್ಲಿ ಬೇಡ.

ಜನ್ಮಸಂಖ್ಯೆ 3

ಎಲ್ಲ ಸಂದರ್ಭದಲ್ಲೂ ನೇರ ಮಾತು ಕೆಲಸಕ್ಕೆ ಬರುವುದಿಲ್ಲ. ಬಹಳ ಡಿಪ್ಲೊಮಾಟಿಕ್ ಆಗಿ ಮಾತನಾಡಿ, ವ್ಯವಹಾರಗಳನ್ನು ಇತ್ಯರ್ಥ ಮಾಡಿಕೊಳ್ಳಿ. ನಿಮ್ಮೆದುರು ಹೇಗೆ ಕಾಣಿಸಿಕೊಳ್ಳುತ್ತಾರೆ ಅದನ್ನೇ ನಿಜ ಅಂದುಕೊಳ್ಳದಿರಿ. ಮದುವೆ, ನಿಶ್ಚಿತಾರ್ಥದ ಮಾತುಕತೆಗಳು ಇದ್ದಲ್ಲಿ ತುಂಬ ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ.

ಜನ್ಮಸಂಖ್ಯೆ 4

ಈ ಹಿಂದೆ ನಿಮ್ಮ ಜತೆ ಜಗಳ ಅಥವಾ ಭಿನ್ನಾಭಿಪ್ರಾಯ ಮಾಡಿಕೊಂಡಿದ್ದವರು ಸಂಧಾನಕ್ಕೆ ಮುಂದಾಗಬಹುದು. ಈ ಸಂದರ್ಭವನ್ನು ಮುಂದೆ ಮಾಡಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಇತರರ ಹಣಕಾಸು ಜವಾಬ್ದಾರಿಗಳನ್ನು ನಿಮ್ಮ ಮೈಮೇಲೆ ಎಳೆದುಕೊಳ್ಳಬೇಡಿ. ಏಕೆಂದರೆ, ಅವರು ನಿಮ್ಮ ಮೇಲೆ ಸಂಪೂರ್ಣ ಅವಲಂಬಿತರಾಗಬಹುದು.

ಜನ್ಮಸಂಖ್ಯೆ 5

ವಿವಾಹಕ್ಕೆ ಹೊರತಾದ ಸಂಬಂಧಕ್ಕೆ ಕೈ ಚಾಚಬೇಡಿ. ಅಥವಾ ಇದು ತಾತ್ಕಾಲಿಕ ವ್ಯಾಮೋಹ ಅಷ್ಟೇ ಎಂಬುದನ್ನು ತಿಳಿದುಕೊಂಡು, ಇಂಥ ಸಂಬಂಧಗಳಿಂದ ದೂರವಿದ್ದಲ್ಲಿ ಎಲ್ಲ ರೀತಿಯಿಂದಲೂ ಸುರಕ್ಷಿತವಾಗಿರುತ್ತೀರಿ. ಏಕಾಂಗಿತನ ನಿಮ್ಮನ್ನು ಕಾಡಿದರೆ ಸಂಗೀತ, ಗಾರ್ಡನಿಂಗ್, ಓದು ಹೀಗೆ ಉತ್ತಮ ಹವ್ಯಾಸಗಳಿಂದ ಬಿಜಿಯಾಗಿ ಇರುವಂತೆ ನೋಡಿಕೊಳ್ಳಿ.

ಜನ್ಮಸಂಖ್ಯೆ 6

ಚಿನ್ನ, ವಜ್ರ, ಪ್ಲಾಟಿನಂ ಈ ರೀತಿಯ ಬೆಲೆಬಾಳುವ ಲೋಹಗಳನ್ನು ಖರೀದಿಸುವ ಯೋಗ ಇದೆ. ಆದರೆ ಖರ್ಚು ಅಂತಾದಾಗ ಸ್ವಲ್ಪ ಹಿಡಿತದಲ್ಲಿ ಇರುವುದು ಉತ್ತಮ. ನಿಮ್ಮ ನಾಲಗೆಯೇ ಈ ದಿನ ನಿಮಗೆ ಹೇಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ಆದ್ದರಿಂದ ಮಾತಿನಲ್ಲಿ ಎಚ್ಚರಿಕೆಯಿಂದ ಇರುವುದು ಮುಖ್ಯ.

ಜನ್ಮಸಂಖ್ಯೆ 7

ಈ ದಿನ ಹೆಚ್ಚೆಚ್ಚು ಸಾಮಾಜಿಕವಾಗಿ ಬಿಡುವಿಲ್ಲದಷ್ಟು ತೊಡಗಿಸಿಕೊಳ್ಳುತ್ತೀರಿ. ಕೆಲವರು ತೋರಿಕೆಗಾಗಿ ನಿಮ್ಮ ಮೇಲೆ ಗೌರವ, ಪ್ರೀತಿ ಇರುವಂತೆ ಮಾಡುತ್ತಾರೆ. ಅಂಥವರಿಂದ ಹೇಗೆ ಅಂತರ ಕಾಪಾಡಿಕೊಳ್ಳಬೇಕು ಎಂಬುದು ನಿಮ್ಮ ಬುದ್ಧಿವಂತಿಕೆ. ವಿದೇಶ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಆರಂಭಿಸುವ ದಿನ ಇದು.

ಜನ್ಮಸಂಖ್ಯೆ 8

ಸಣ್ಣ- ಪುಟ್ಟ ತಮಾಷೆ ಸಂಗತಿಗಳೂ ಗಂಭೀರವಾಗಿ ಬಿಡುವ ಸಾಧ್ಯತೆ ಇದೆ. ಆದ್ದರಿಂದ ಯಾರ ಜತೆಗೂ ಸಲುಗೆ ತೆಗೆದುಕೊಳ್ಳಬೇಡಿ. ಇನ್ನು ಸೈಟು- ಮನೆ ಖರೀದಿಗಾಗಿ ಅಡ್ವಾನ್ಸ್‌ ಮಾಡಬೇಕು ಎಂದಿದ್ದಲ್ಲಿ ಮುಂದೂಡುವುದು ಉತ್ತಮ. ಬೇರೆಯವರು ವಾಹನಗಳನ್ನು ತೆಗೆದುಕೊಂಡು ಹೋಗುವ ಅಭ್ಯಾಸ ಇದ್ದಲ್ಲಿ ಇಂದು ಖಡಾಖಂಡಿತವಾಗಿ ಬೇಡ.

ಜನ್ಮಸಂಖ್ಯೆ 9

ನಿಮ್ಮ ತೂಕ, ರೂಪ, ದೇಹ ಸೌಂದರ್ಯದ ಬಗ್ಗೆ ಹೆಚ್ಚು ಆಲೋಚನೆ ಮಾಡುತ್ತೀರಿ. ಉದ್ಯೋಗ ಸ್ಥಳದಲ್ಲಿ ಏನೋ ಸರಿ ಇಲ್ಲ ಎಂಬ ಭಾವ ಮೂಡಲಿದೆ. ಹಾಗಂತ ಏಕಾಏಕಿ ಕೆಲಸ ಬಿಡುವ, ಕೆಲಸ ಬದಲಾಯಿಸುವ ನಿರ್ಧಾರಕ್ಕೆ ಬಾರದಿರಿ. ಇನ್ನು ವೈಯಕ್ತಿಕ ವಿಚಾರಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.

ಲೇಖನ- ಎನ್‌.ಕೆ.ಸ್ವಾತಿ

LEAVE A REPLY

Please enter your comment!
Please enter your name here