ಬೆಂಗಳೂರು: ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸರ ಕಾರ್ಯಾಚರಣೆ ನಡೆಸಿ ನಕಲಿ ನೋಟ್ ನೀಡಿ ಕ್ಯಾಬ್ ಡ್ರೈವರ್ ಗಳಿಗೆ ವಂಚಿಸುತ್ತಿದ್ದ ಆರೋಪಿ ಬಂಧಿಸಿದ್ದಾರೆ. ಡಾ.ಕೆ.ಆರ್.ಸಂಜಯ್, ಬಂಧಿತ ಚೆನ್ನೈ ಮೂಲದ ಆರೋಪಿಯಾಗಿದ್ದು, ಕ್ಯಾಬ್ ಡ್ರೈವರ್ ಚಂದ್ರ ಶೇಖರ್ ಎಂಬುವರ ಕ್ಯಾಬ್ ನಲ್ಲಿ ಆಂದ್ರದ ಕದ್ರಿಯಿಂದ ಬೆಂಗಳೂರಿಗೆ ಆರೋಪಿ ಬಂದಿದ್ದನು.
ಬಳಿಕ ಮಾಗಡಿ ರಸ್ತೆಯ ಹೌಸಿಂಗ್ ಬೋರ್ಡ್ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್ ಗೆ ಹೋಗಿ ಕ್ಯಾಬ್ ಡ್ರೈವರ್ ಗೆ 10,500 ರೂ. ಖೋಟ ನೋಟುಗಳನ್ನ ನೀಡಿ 10,000 ಫೋನ್ ಪೇ ಮಾಡಿಸಿಕೊಂಡಿದ್ದನು.
ತದನಂತರ ಕ್ಯಾಬ್ ಡ್ರೈವರ್ ಮೊಬೈಲ್ ಪಡೆದು ಎಸ್ಕೇಪ್ ಆಗಿದ್ದನು. ಈ ಬಗ್ಗೆ ದೂರು ದಾಖಲಿಸಿಕೊಂಡು ಮಾಗಡಿ ರಸ್ತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 90 ಸಾವಿರ ಮೌಲ್ಯದ 500 ಮುಖಬೆಲೆಯ ಖೋಟ ನೋಟು, ಪ್ರಿಂಟರ್, 9 ಮೊಬೈಲ್ ಫೋನ್, ಹಾಗೆ ಕ್ಯಾಬ್ ಡ್ರೈವರ್ ಗೆ ನೀಡಿದ್ದ 500 ಮುಖ ಬೆಲೆಯ 21ಖೋಟಾ ನೋಟುಗಳು ಸೀಜ್ ಮಾಡಲಾಗಿದೆ.