
Colonel Sophia Qureshi and Wing Commander Vyomika Singh
ನವ ದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಭಯೋತ್ಪಾದಕ ಶಿಬಿರಗಳ ಮೇಲೆ ಬೆಳಗಿನ ಜಾವ 1:05 ರಿಂದ 1:30 ರ ನಡುವೆ ಬಾಂಬ್ ದಾಳಿ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಸುಮಾರು 100 ಭಯೋತ್ಪಾದಕರು ಸಾವನ್ನಪ್ಪಿದರು.
ನವದೆಹಲಿಯಲ್ಲಿ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಅಧಿಕಾರಿಗಳು ಸೇರಿದಂತೆ ಭಾರತೀಯ ಸೇನಾ ಅಧಿಕಾರಿಗಳು ವಾಯುದಾಳಿಯ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಲ್ ಸೋಫಿಯಾ ಖುರೇಷಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳು ಮತ್ತು ಅವರ ಕುಟುಂಬಗಳಿಗೆ ನ್ಯಾಯವನ್ನು ಪಡೆಯಲು ಆಪರೇಷನ್ ಸಿಂಧೂರ್ ಎಂದು ಹೆಸರಿಸಲಾದ ಕಾರ್ಯಾಚರಣೆಯನ್ನು ಬೆಳಗಿನ ಜಾವ 1:05 ರಿಂದ 1:30 ರ ನಡುವೆ ಪ್ರಾರಂಭಿಸಲಾಯಿತು ಎಂದು ವಿವರಿಸಿದರು. ನಾಗರಿಕ ಮೂಲಸೌಕರ್ಯಕ್ಕೆ ಹಾನಿಯಾಗದಂತೆ ಮತ್ತು ನಾಗರಿಕರ ಜೀವಹಾನಿಯನ್ನು ತಡೆಗಟ್ಟಲು ಎಚ್ಚರಿಕೆಯಿಂದ ಪರಿಗಣಿಸುವ ಮೂಲಕ ಗುರಿಯಿಟ್ಟುಕೊಂಡ ಭಯೋತ್ಪಾದಕ ಶಿಬಿರಗಳನ್ನು ಯಶಸ್ವಿಯಾಗಿ ನಾಶಪಡಿಸಲಾಯಿತು.