Pedestrian victim of hit and run in Bangalore
ಬೆಂಗಳೂರು:
ರಾಜಾಜಿನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಹಿಟ್ ಆ್ಯಂಡ್ ರನ್ ಗೆ ಪಾದಚಾರಿಯೊಬ್ಬರು ಬಲಿಯಾದ ದಾರುಣ ಘಟನೆ ನವರಂಗ್ ಸಿಗ್ನಲ್ ಬಳಿ ಭಾನುವಾರ ನಡೆದಿದೆ.
ಪ್ರಕಾಶ್ ನಗರದ ನಿವಾಸಿಯಾಗಿರುವ ಕೃಷ್ಣಪ್ಪ (55) ಇಂದು ಬೆಳಗ್ಗೆ ರಾಜ್ ಕುಮಾರ್ ರಸ್ತೆ ಕಡೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ನವರಂಗ್ ಸಿಗ್ನಲ್ ಬಳಿ ಕಾರು ಚಾಲಕ ಯೂಟರ್ನ್ ತೆಗೆಯುವಾಗ ಕೃಷ್ಣಪ್ಪ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಕೃಷ್ಣಪ್ಪ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ರಾಜಾಜಿನಗರ ಸಂಚಾರ ಪೊಲೀಸರು ಪರಾರಿಯಾಗಿದ್ದ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
