Home ತುಮಕೂರು ವಿಶ್ವೇಶ್ವರಯ್ಯ ಜಲ ನಿಗಮದಿಂದ ಬಿಲ್​ ಬಾಕಿ ಹಿನ್ನೆಲೆ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗುತ್ತಿಗೆದಾರ ಎಚ್ಚರಿಕೆ

ವಿಶ್ವೇಶ್ವರಯ್ಯ ಜಲ ನಿಗಮದಿಂದ ಬಿಲ್​ ಬಾಕಿ ಹಿನ್ನೆಲೆ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗುತ್ತಿಗೆದಾರ ಎಚ್ಚರಿಕೆ

9
0

ತುಮಕೂರು: ವಿಶ್ವೇಶ್ವರಯ್ಯ ಜಲ ನಿಗಮದಿಂದ ಬಿಲ್​ ಬಾಕಿ ಹಿನ್ನೆಲೆ ಕಾಂಗ್ರೆಸ್​ ಮುಖಂಡ, ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರಥಮ ದರ್ಜೆ ಗುತ್ತಿಗೆದಾರ ಸುಜಿತ್ ಅವರು ವಿಶ್ವೇಶ್ವರಯ್ಯ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಎಸ್​​​ಸಿಪಿ ಅಡಿ ರಸ್ತೆ ಹಾಗೂ ಚೆಕ್ ಡ್ಯಾಮ್​​ಗಳನ್ನು ನಿರ್ಮಾಣ ಮಾಡಿಸಿದ್ದಾರೆ.

ಆದರೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಪ್ಪ ಕಾಮಗಾರಿ ಸರಿಯಾಗಿ ಆಗಿಲ್ಲ ಎಂದು ಕುದ್ದು ತಾವೇ ತನಿಖೆ ನಡೆಸಿದ್ದರು. ಆದರೆ ತನಿಖೆಯಲ್ಲಿ ಕಾಮಗಾರಿ ಸರಿಯಾಗಿ ಆಗಿದೆ ಎಂದು ಸಾಬೀತಾಗಿದೆ. ಆದರೂ ಕೂಡ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಪ್ಪ ಅವರು ಪ್ರಥಮದರ್ಜೆ ಗುತ್ತಿಗೆದಾರ ಸುಜಿತ್ ಅವರ 45 ಲಕ್ಷ ರೂ. ಬಾಕಿ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ರಾಜಕೀಯ ದುರುದ್ದೇಶದಿಂದ ಹಣ ಬಿಡುಗಡೆ ಮಾಡಿಲ್ಲ. ನಾನು ಎಸ್​ಸಿ ಆದ ಕಾರಣ ನನ್ನನ್ನು ತುಳಿಯುತ್ತಿದ್ದಾರೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಪ್ಪ ಅವರೇ ಕಾರಣ. ಸಣ್ಣಚಿತ್ತಪ್ಪ ಅವರಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಪ್ರಥಮದರ್ಜೆ ಗುತ್ತಿಗೆದಾರ ಸುಜೀತ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here