Home High Court/ಹೈಕೋರ್ಟ್ Plastic Product: Karnataka High Court upholds Centre’s notification | ಪ್ಲಾಸ್ಟಿಕ್ ಉತ್ಪನ್ನ: ಕೇಂದ್ರದ...

Plastic Product: Karnataka High Court upholds Centre’s notification | ಪ್ಲಾಸ್ಟಿಕ್ ಉತ್ಪನ್ನ: ಕೇಂದ್ರದ ಅಧಿಸೂಚನೆ ಎತ್ತಿಹಿಡಿದ ಹೈಕೋರ್ಟ್

26
0
Karnataka High Court

ಬೆಂಗಳೂರು:

ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಿದ್ಧಪಡಿಸಲು ಬಳಸುವ ಕಚ್ಚಾವಸ್ತು ಪಾಲಿ ಎಥಿಲೀನ್‍ಗೆ ಗುಣಮಟ್ಟ ನಿಯಂತ್ರಣ ಮಾಡುವ ದಿಸೆಯಲ್ಲಿ ಕೇಂದ್ರ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಈ ಕುರಿತು ಕೇಂದ್ರ ಸರಕಾರ 2021ರ ಎ.15ರಂದು ಹೊರಡಿಸಿರುವ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ಅಖಿಲ ಭಾರತ ಎಚ್‍ಡಿಪಿಇ (ಹೈಡೆನ್ಸಿಟಿ ಪಾಲಿ ಎಥಿಲೀನ್–ಪಿಪಿ) ಮತ್ತು ಪಾಲಿಪೆಪ್ರೊಪಿಲೀನ್ ಫ್ಯಾಬ್ರಿಕ್ ತಯಾರಿಕಾ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.

‘ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಿದ್ಧಗೊಳ್ಳುವ ಉತ್ಪನ್ನಗಳಲ್ಲಿ ಗುಣಮಟ್ಟ ಕಾಯ್ದುಕೊಂಡಲ್ಲಿ ಮಾತ್ರ ವಿಶ್ವದ ಇತರ ದೇಶಗಳೊಂದಿಗೆ ಪೈಪೆಪೋಟಿ ನಡೆಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಅಗತ್ಯವಿರುವ ಎಲ್ಲ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಹೀಗಾಗಿ, ಕೇಂದ್ರ ಸರಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here