ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ರಾಜಧಾನಿ ಮತ್ತು ಕರ್ನಾಟಕ ಎಕ್ಸ್ಪ್ರೆಸ್ಗಳ ಪ್ಲಾಟ್ಫಾರ್ಮ್ ಬದಲಾವಣೆ
ಬೆಂಗಳೂರು: ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ರಾಜಧಾನಿ ಎಕ್ಸ್ಪ್ರೆಸ್ ಹಾಗೂ ಕರ್ನಾಟಕ ಎಕ್ಸ್ಪ್ರೆಸ್ ರೈಲುಗಳ ಪ್ಲಾಟ್ಫಾರ್ಮ್ ಸಂಖ್ಯೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಏಪ್ರಿಲ್ 10, 2026 ರಿಂದ ಜಾರಿಗೆ ಬರುವಂತೆ, 22691 ಸಂಖ್ಯೆಯ ಕೆಎಸ್ಆರ್ ಬೆಂಗಳೂರು – ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್ಪ್ರೆಸ್ ರೈಲು ಈಗ ಪ್ಲಾಟ್ಫಾರ್ಮ್ ಸಂಖ್ಯೆ 8 ಬದಲಿಗೆ ಪ್ಲಾಟ್ಫಾರ್ಮ್ ಸಂಖ್ಯೆ 1ರಿಂದ ಪ್ರಯಾಣ ಆರಂಭಿಸುತ್ತದೆ.
ಅದೇ ರೀತಿ, 12627 ಸಂಖ್ಯೆಯ ಕೆಎಸ್ಆರ್ ಬೆಂಗಳೂರು – ನವದೆಹಲಿ ಕರ್ನಾಟಕ ಎಕ್ಸ್ಪ್ರೆಸ್ ರೈಲು ಪ್ಲಾಟ್ಫಾರ್ಮ್ ಸಂಖ್ಯೆ 1 ಬದಲಿಗೆ ಪ್ಲಾಟ್ಫಾರ್ಮ್ ಸಂಖ್ಯೆ 2ರಿಂದ ಹೊರಡಲಿದೆ.
ಪ್ರಯಾಣಿಕರು ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ತಕ್ಕ ಸಮಯಕ್ಕೆ ನಿಲ್ದಾಣಕ್ಕೆ ಆಗಮಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
