ಬೆಂಗಳೂರು:
ಬೆಳ್ಳಂಬೆಳಗ್ಗೆ ದರೋಡೆಕೋರನ ಮೇಲೆ ಪೊಲೀಸರು ಗುಂಡು ಹಾರಿಸಿ ನಂತರ ಬಂಧಿಸಿದ ಸಿನಿಮೀಯ ಘಟನೆ ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದರೋಡೆಕೋರ ದಿನೇಶ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.ನ.24 ರಂದು ಆರೋಪಿ ದಿನೇಶ್, ಬಾಗಲೂರು ಬಳಿ ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದು, ಕ್ಯಾಮೆರಾ ಮೊಬೈಲ್ ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿ ಇರುವ ಸ್ಥಳದ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ದಿನೇಶ್ ನನ್ನು ಬಂಧಿಸಲು ತೆರಳಿದ್ದರು.
ಈ ವೇಳೆ ಆರೋಪಿ ಪಿಎಸ್ ಐ ವಿಂದ್ಯಾ, ಕಾನ್ಸ್ಟೇಬಲ್ ಸುಮಂತ್ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಹೀಗಾಗಿ ತಕ್ಷಣವೇ ಆತ್ಮ ರಕ್ಷಣೆಗಾಗಿ ಬಾಗಲೂರು ಇನ್ಸ್ಪೆಕ್ಟರ್ ಪ್ರಶಾಂತ್ ಆರ್ ವರ್ಣಿ ಆರೋಪಿ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ.