ಕಲಬುರಗಿ:
ಕಲಬುರಗಿ ಜಿಲ್ಲೆಯಲ್ಲಿ ಮರಳು ಸಾಗಣೆ ತಡೆಯಲು ಯತ್ನಿಸಿದ್ದ ಪೊಲೀಸ್ ಪೇದೆ ಹತ್ಯೆಯ ಆರೋಪಿ, ಮರಳು ಮಾಫಿಯಾದ ಆರೋಪಿ ಪೊಲೀಸ್ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದು ಮರಳಿ ವಶಕ್ಕೆ ಪಡೆದಿದ್ದಾರೆ.
ಆರೋಪಿ ನೆಲೋಗಿ ಪೊಲೀಸ್ ಠಾಣೆಯ ಪಿಎಸ್ ಐ ಮೇಲೆ ಹಲ್ಲೆ ಮಾಡಿ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈತ ಪೊಲೀಸ್ ಪೇದೆ ಮಯೂರ ಚೌಹಾಣ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ.
ಜೇವರ್ಗಿ ಪೊಲೀಸ್ ಠಾಣೆಯ ಮತ್ತೊಬ್ಬ ಪಿಎಸ್ಐ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಸೈಬಣ್ಣ ಕರಜಗಿಗೆ ಗುಂಡೇಟು ಹೊಡೆದಿದ್ದು, ಮರಳಿ ವಾಪಸ್ ವಶಕ್ಕೆ ಪಡೆದಿದ್ದಾರೆ.
ಜೇವರ್ಗಿ ತಾಲೂಕಿನ ಮಂಡೇವಾಲದಲ್ಲಿ ಈ ಘಟನೆ ನಡೆದಿದೆ. ಮಯೂರ್ ಚೌಹಾಣ್ ಹತ್ಯೆ ಪ್ರಕರಣದ ಆರೋಪಿ ವಿಜಯಪುರ ಜಿಲ್ಲೆಯ ಅಲಮೇಲ್ ಗ್ರಾಮದಲ್ಲಿ ಆಶ್ರಯ ಪಡೆದಿದ್ದ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲು ಪೊಲೀಸ್ ತಂಡ ತೆರಳಿತ್ತು. ಅಲ್ಮೇಲ್ ನಿಂದ ಆರೋಪಿಯನ್ನು ಜೇವರ್ಗಿಗೆ ಕರೆತರಲಾಗುತ್ತಿತ್ತು. ಮಾರ್ಗಮಧ್ಯದಲ್ಲಿ ಮುಖ್ಯ ಆರೋಪಿ, ನೆಲೋಗಿ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ಮೇಲೆ ಚಾಕುವಿನಿಂದ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಪೊಲೀಸರು ಯತ್ನಿಸಿದರಾದರೂ ಆತ ದಾಳಿ ಮುಂದುವರೆಸಿದ ಕಾರಣ ಕಾಲಿಗೆ ಗುಂಡುಹೊಡೆದು ವಶಕ್ಕೆ ಪಡೆಯಲಾಗಿದೆ.