ಬೆಂಗಳೂರು:
ಬೆಂಗಳೂರಿನಿಂದ ಅರಸೀಕೆರೆ- ದಾವಣಗೆರೆ- ಹುಬ್ಬಳ್ಳಿ ಮಾರ್ಗವಾಗಿ ನವದೆಹಲಿಗೆ ಹೊರಟಿತ್ತು ಕರ್ನಾಟಕ ಸಂಪರ್ಕ ಕ್ರಾಂತಿ ರೈಲಿನ ಸಂಭವನೀಯ ಅಪಘಾತ ತಪ್ಪಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನೈರುತ್ಯ ರೈಲ್ವೆ ಮುಖ್ಯ ಕಾರ್ಯಾಚರಣೆ ಅಧಿಕಾರಿ ಹರಿಶಂಕರ್ ವರ್ಮ ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ರಾಸ್ ರೈಲು ನಿಲ್ದಾಣದ ಬಳಿ ಫೆಬ್ರುವರಿ 8ರಂದು ಕರ್ನಾಟಕ ಸಂಪರ್ಕ ಕ್ರಾಂತಿ ರೈಲಿನ ಸಂಭವನೀಯ ಅಪಘಾತ ತಪ್ಪಿದೆ. ಒಡಿಶಾ ಘಟನೆಯ ಬಳಿಕ ಬಹಿರಂಗಗೊಂಡಿದೆ.
ಬೀರೂರಿನಿಂದ ಬರುತ್ತಿದ್ದ ರೈಲು ಹೊಸದುರ್ಗ ಸಮೀಪದ ನಿಲ್ದಾಣದಲ್ಲಿ ಮಾರ್ಗ ಬದಲಿಸಿತ್ತು. ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು. ಲೋಕೊಪೈಲಟ್ ಸಮಯಪ್ರಜ್ಞೆಯಿಂದಾಗಿ ಈ ಅಪಘಾತ ತಪ್ಪಿತ್ತು.
ಸಿಗ್ನಲ್ ನೀಡಿದ್ದ ಮಾರ್ಗದಲ್ಲಿ ಗೂಡ್ಸ್ ರೈಲು ಬರುತ್ತಿತ್ತು. ಇದನ್ನು ಗಮನಿಸಿದ ಲೋಕೊ ಪೈಲಟ್ ಮಾರ್ಗ ಬದಲಿಸಿದರು. ಲೋಕೋ ಪೈಲಟ್ ಮುನ್ನೆಚ್ಚರಿಕೆಯಿಂದಾಗಿ ಸಂಭವನೀಯ ಅಪಘಾತವೊಂದು ತಪ್ಪಿದೆ ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಂದು ರೈಲಿನಲ್ಲಿ ಸಾವಿರಕ್ಕೂ ಅಧಿಕ ಪ್ರಯಾಣಿಕರಿದ್ದರು.

‘ಅಂದು ಈ ಬೆಳವಣಿಗೆ ನಡೆದಿದ್ದು ಸತ್ಯ. ಆದರೆ, ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಸಂವಹನ ಕೊರತೆಯಿಂದಾಗಿ ಅಚಾತುರ್ಯ ಆಗಿದ್ದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು ಎಂಬುದು ತಿಳಿದುಬಂದಿದೆ’ ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.