ಬೆಂಗಳೂರು;- ಅಕ್ಟೋಬರ್ ತಿಂಗಳಲ್ಲಿ ರಾಜಧಾನಿ ಬೆಂಗಳೂರು ಜನರಿಗೆ ಪವರ್ ಶಾಕ್ ಎದುರಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಇಂದಿನಿಂದ ಅಕ್ಟೋಬರ್ 30ರವರೆಗೆ ವಿವಿಧ ದಿನಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಆಗಲಿದೆ.
ಈ ಸಂಬಂಧ ಸಮರ್ಪಕ ವಿದ್ಯುತ್ ಪೂರೈಕೆ ಆಗುವುದಿಲ್ಲ. ಆದ್ದರಿಂದ ಸಹಕರಿಸುವಂತೆ ಬೆಸ್ಕಾಂ ಕೋರಿದೆ. ದುರಸ್ತಿ ಕಾಮಗಾರಿ ಕೈಗೊಂಡ ಕಾರಣ, ಅಕ್ಟೋಬರ್ 9, 11, 16 ಮತ್ತು 18ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸದಾಶಿವನಗರ, ವೀರಸಾಗರ, ನಜರಾಬಾದ್, ಬನಶಂಕರಿ, ಉಪ್ಪಾರಹಳ್ಳಿ, ಶಾಂತಿನಗರ, ಬನಶಂಕರಿ 2ನೇ ಹಂತ, ಅಮರಜ್ಯೋತಿ ನಗರ, ಗೂಡ್ಸ್ ಶೆಡ್ ಕಾಲೋನಿ, ವಿಶ್ವಣ್ಣ ಬಡವಣೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಅಂತರಸನಹಳ್ಳಿ ಸ್ವೀಕರಣಾ ಕೇಂದ್ರದಿಂದ ಹೊರಹೊಮ್ಮುವ ಕೆಲ ವಿದ್ಯುತ್ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಅಕ್ಟೋಬರ್ 9, 11, 13, 16, 18, 20, 25, 27 ಹಾಗೂ 30ರಂದು ಬೆಳಗ್ಗೆ 7 ಗಂಟೆ ಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಹೊಸಹಳ್ಳಿ, ಬ೦ಡನಹಳ್ಳಿ, ಶಿವಪುರ, ಎಂಎಂಎ ಕಾವಲ್, ತಾಳೆಕೊಪ್ಪ, ಗಣೇಶಪುರ, ಕಳ್ಳನಹಳ್ಳಿ, ಮತ್ತಿಕೆರೆ, ಕುರೇಹಳ್ಳಿ, ಹಾಗಲವಾಡಿ ಎನ್.ಜೆ.ವೈ, ಕಾಟನಹಳ್ಳಿ, ಮರಾಠಿ ಪಾಳ್ಯ, ಚಿ೦ದಿಗೆರೆ, ತೊಣಸನಹಳ್ಳಿ, ಎಣ್ಣೆಕಟ್ಟೆ ಇರಕಸಂದ್ರ, ಚೇಳೂರು ಟೌನ್, ಜಾಲಗುಣಿ, ಆರಿವೇಸಂದ್ರ, ನಿಂಬೇಕಟ್ಟೆ ಮಾದೇನಹಳ್ಳಿ ಇಡಕನಹಳ್ಳಿ, C ಅರಿವೇಸಂದ್ರ, ಮಂಚಲದೊರೆ, ವಾಟರ್ ಸಪ್ಪೆ ಫೀಡರ್, ನಲ್ಲೂರು ಕೊಡಿಯಾಲ NJY, ಹೊಸಕೆರೆ, ಹಾಗಲವಾಡಿ, ಅಳಿಲಘಟ್ಟ ಹೂವಿನಕಟ್ಟೆ, , ಕಾಳಿಂಗನಹಳ್ಳಿ ಎನ್. ಜೆ.ವೈ, ಸೋಮಲಾಪುರ NJY,ವೈ, ಭೋಗಸಂದ್ರ NJY, ಬೆಟ್ಟದಹಳ್ಳಿ, ಗುಡೇನಹಳ್ಳಿ, ದೊಡ್ಡರಿ, ಚನ್ನೇನಹಳ್ಳಿ, ಹಿರೆ ತೊಟ್ಟಿಲುಕೆರೆ, ಹಿರೆಗುಂಡಗಲ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಡಿಗೇನಹಳ್ಳಿ ವ್ಯಾಪ್ತಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಇರುವುದಿಲ್ಲ. ಚಿಕ್ಕತಗ್ಗಲಿ, ದೊಡ್ಡತಗ್ಗಲಿ, ಉಮ್ಮಲು, ಜಡಿಗೇನಹಳ್ಳಿ, ಹರಳೂರು, ಓರೋಹಳ್ಳಿ, ಗೊಣಕನಹಳ್ಳಿ, ತಗ್ಗಲಿ ಹೊಸಹಳ್ಳಿ, ದೊಡ್ಡದೇನಹಳ್ಳಿ, ದೇವನಗುಂದಿ ಕ್ರಾಸ್, ವಾಗಟ, ಬಿಸನಹಳ್ಳಿ, ಮಾಕನಹಳ್ಳಿ, ಕಣೆಕಲ್ಲು, ಕಟ್ಟಿಗೇನಹಳ್ಳಿ, ಖಾಜಿ ಹೊಸಹಳ್ಳಿ, ಐಒಸಿಎಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಇನ್ನೂ ದೇವನಗುಂದಿ ವಿತರಣೆ ವ್ಯಾಪ್ತಿಯ ಡಿ.ಹೊಸಹಳ್ಳಿ, ದೇವನಗುಂದಿ, ದೊಡ್ಡ ದುನ್ನಸಂದ್ರ ಕ್ರಾಸ್, ಸೌಖ್ಯ ರೋಡ್, ಕಣೆಕಲ್ ಕಾಸ್, ತಿರುಮಲಶೆಟ್ಟಿಹಳ್ಳಿ, ನಾರಾಯಣಕೆರೆ, ಕಲ್ಕುಂಟೆ ಅಗ್ರಹಾರ, ದೇವಲಾ ಪುರ, ಸಮ್ಮೇತನಹಳ್ಳಿ, ಹೆಮ್ಮಂಡಹಳ್ಳಿ, ಗುಂಡೂರು, ಬಾಗೂರು, ತತ್ತನೂರು, ತಿರುವ ರಂಗ, ಶಿವನಾಪುರ, ಲಿಂಗಧೀರ ಮಲ್ಲಸಂದ್ರ, ಗಣಗಲೂರು, ಮೇಡಿಮಲ್ಲಸಂದ್ರ, ಮೇಡಹಳ್ಳಿ, ಅನುಗೊಂಡನಹಳ್ಳಿ, ಯಡಗೊಂಡನಹಳ್ಳಿ, ಮುತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
The post Power Cut; ಈ ತಿಂಗಳೆಲ್ಲಾ ಬೆಂಗಳೂರಿಗರಿಗೆ ಪವರ್ ಶಾಕ್ – ಈ ಏರಿಯಾಗಳಲ್ಲಿ ಇರಲ್ಲ ಪವರ್ appeared first on Ain Live News.