Home Uncategorized Prabhas: ಪ್ರಭಾಸ್​ ಹೊಸ ಚಿತ್ರದ ಒಂದೇ ಸೆಟ್​ಗೆ 10 ಕೋಟಿ ರೂ. ಸುರಿಯಲು ಮುಂದಾದ ನಿರ್ಮಾಪಕರು

Prabhas: ಪ್ರಭಾಸ್​ ಹೊಸ ಚಿತ್ರದ ಒಂದೇ ಸೆಟ್​ಗೆ 10 ಕೋಟಿ ರೂ. ಸುರಿಯಲು ಮುಂದಾದ ನಿರ್ಮಾಪಕರು

31
0

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್ (Prabhas) ಅವರ ಎಲ್ಲ ಸಿನಿಮಾಗಳು ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗುತ್ತಿವೆ. ‘ಆದಿಪುರುಷ್​’, ‘ಸಲಾರ್​’ (Salaar) ಸಿನಿಮಾಗಳ ಮೇಲೆ ನೂರಾರು ಕೋಟಿ ರೂಪಾಯಿ ಸುರಿಯಲಾಗುತ್ತಿದೆ. ಇವುಗಳ ಜೊತೆಗೆ ನಿರ್ದೇಶಕ ಮಾರುತಿ (Director Maruthi) ಅವರ ಹೊಸ ಸಿನಿಮಾದಲ್ಲೂ ಪ್ರಭಾಸ್​ ನಟಿಸುತ್ತಿದ್ದು, ಆ ಚಿತ್ರದ ಬಗ್ಗೆ ಒಂದು ಅಪ್​ಡೇಟ್​ ಕೇಳಿಬಂದಿದೆ. ಈ ಚಿತ್ರದ ಒಂದು ಸೆಟ್​ಗೆ ಬರೋಬ್ಬರಿ 10 ಕೋಟಿ ರೂಪಾಯಿ ಬಜೆಟ್​ ಮೀಸಲಿಡಲಾಗುತ್ತಿದೆ. ಈ ಸುದ್ದಿ ಕೇಳಿ ಪ್ರಭಾಸ್ ಫ್ಯಾನ್ಸ್​ ಎಗ್ಸೈಟ್​ ಆಗಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್​ ದ್ವಿಪಾತ್ರ ಮಾಡುತ್ತಾರೆ ಎಂಬ ಗುಮಾನಿ ಕೂಡ ಇದೆ. ಆದರೆ ಈ ಕುರಿತು ಚಿತ್ರತಂಡದಿಂದ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ.

ಪ್ರಭಾಸ್​ ನಟನೆಯ ಈ ಹಿಂದಿನ ಸಿನಿಮಾಗಳಾದ ‘ಸಾಹೋ’ ಮತ್ತು ‘ರಾಧೆ ಶ್ಯಾಮ್​’ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ. ಆ ಬಳಿಕ ಪ್ರಭಾಸ್​ ಡಿಮ್ಯಾಂಡ್​ ಕಡಿಮೆ ಆಗಬಹುದು ಎಂದು ಕೆಲವರು ಮಾತನಾಡಿಕೊಂಡಿದ್ದುಂಟು. ಆದರೆ ಆ ಎರಡು ಚಿತ್ರಗಳ ಸೋಲಿನಿಂದ ಪ್ರಭಾಸ್​ ವೃತ್ತಿಬದುಕಿನಲ್ಲಿ ಹೆಚ್ಚೇನೂ ಡ್ಯಾಮೇಜ್​ ಆಗಿಲ್ಲ. ಅವರ ಹೊಸ ಸಿನಿಮಾಗಳ ಮೇಲೆ ಬೇಕಾದಷ್ಟು ಬಂಡವಾಳ ಸುರಿಯಲು ನಿರ್ಮಾಪಕರು ಮುಂದಾಗುತ್ತಿದ್ದಾರೆ.

ನಿರ್ದೇಶಕ ಮಾರುತಿ ಹಾಗೂ ಪ್ರಭಾಸ್​ ಕಾಂಬಿನೇಷನ್​ನ ಸಿನಿಮಾದಲ್ಲಿ ಥಿಯೇಟರ್​ಗೆ ಸಂಬಂಧಿಸಿದ ಕಥೆ ಇರಲಿದೆ. ಅದಕ್ಕಾಗಿ ಹಳೇ ಕಾಲದ ಒಂದು ಚಿತ್ರಮಂದಿರದ ಸೆಟ್​ ಹಾಕಲಾಗುತ್ತಿದೆ. ಚಿತ್ರದ ಬಹುತೇಕ ದೃಶ್ಯಗಳು ಅದೇ ಸೆಟ್​ನಲ್ಲಿ ನಡೆಯಲಿವೆ. ಒಟ್ಟು 10 ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸೆಟ್​ ತಯಾರಾಗುತ್ತಿದೆ ಎಂದು ತೆಲುಗಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ.

‘ಪೀಪಲ್​ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್​ ಮೂಲಕ ಈ ಸಿನಿಮಾ ಸಿದ್ಧವಾಗುತ್ತಿದೆ. ಪ್ರಭಾಸ್​ ಜೊತೆ ಮಾಳವಿಕಾ ಮೋಹನನ್​, ನಿಧಿ ಅಗರ್​ವಾಲ್​ ಮುಂತಾದವರು ತೆರೆ ಹಂಚಿಕೊಳ್ಳಲಿದ್ದಾರೆ. ಹಾರರ್​-ಕಾಮಿಡಿ ಪ್ರಕಾರದ ಈ ಚಿತ್ರಕ್ಕೆ ಒಂದು ಹಂತದ ಶೂಟಿಂಗ್​ ಮುಗಿದಿದೆ. ಮುಂದಿನ ಶೆಡ್ಯೂಲ್​ಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಪ್ರಭಾಸ್​ ಜೊತೆ ತಳುಕು ಹಾಕೊಂಡ ಕೃತಿ ಸನೋನ್​ ಹೆಸರು:

‘ಆದಿಪುರುಷ್​’ ಚಿತ್ರದಲ್ಲಿ ಪ್ರಭಾಸ್​ ಮತ್ತು ಕೃತಿ ಸನೋನ್​ ಅವರು ಜೊತೆಯಾಗಿ ನಟಿಸುತ್ತಿದ್ದಾರೆ. ಇಬ್ಬರ ನಡುವೆ ಪ್ರೀತಿ ಚಿಗುರಿದೆ ಎಂಬ ಅರ್ಥ ಬರುವ ರೀತಿಯಲ್ಲಿ ಇತ್ತೀಚೆಗೆ ನಟ ವರುಣ್​ ಧವನ್​ ಅವರು ಮಾತನಾಡಿದ್ದರು. ಆದರೆ ಆ ರೀತಿ ಏನೂ ಇಲ್ಲ ಎಂದು ಕೃತಿ ಸನೋನ್​ ಅವರು ಎಲ್ಲ ವದಂತಿಯನ್ನು ತಳ್ಳಿಹಾಕಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

LEAVE A REPLY

Please enter your comment!
Please enter your name here