Home Uncategorized Prakash Raj: ‘ಬೇಷರಂ ರಂಗ್​’ ವಿವಾದ; ‘ಇದನ್ನೆಲ್ಲ ಎಲ್ಲಿಯವರೆಗೆ ಸಹಿಸಬೇಕು’ ಅಂತ ಪ್ರಶ್ನೆ ಮಾಡಿದ ಪ್ರಕಾಶ್​...

Prakash Raj: ‘ಬೇಷರಂ ರಂಗ್​’ ವಿವಾದ; ‘ಇದನ್ನೆಲ್ಲ ಎಲ್ಲಿಯವರೆಗೆ ಸಹಿಸಬೇಕು’ ಅಂತ ಪ್ರಶ್ನೆ ಮಾಡಿದ ಪ್ರಕಾಶ್​ ರಾಜ್​

24
0

ನಟ ಪ್ರಕಾಶ್​ ರಾಜ್​ (Prakash Raj) ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ಎಂದಿಗೂ ಹಿಂದೇಟು ಹಾಕಿದವರಲ್ಲ. ಆ ಕಾರಣದಿಂದ ಅವರು ಕೆಲವರ ವಿರೋಧ ಕಟ್ಟಿಕೊಂಡಿದ್ದೂ ಉಂಟು. ಹಾಗಂತ ಅವರು ಟ್ರೋಲ್ ಮಂದಿಗೆ ಹೆದರಿ ಸುಮ್ಮನೆ ಕೂತಿಲ್ಲ. ಚಿತ್ರರಂಗದ ಅನೇಕ ಸಂಗತಿಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಾರೆ. ಈಗ ಹೊಸ ಚರ್ಚೆ ಹುಟ್ಟುಹಾಕಿರುವ ‘ಬೇಷರಂ ರಂಗ್​..’ ಹಾಡಿನ ಬಗ್ಗೆ ಅವರು ಟ್ವೀಟ್​ ಮಾಡಿದ್ದಾರೆ. ಈ ಸಾಂಗ್​ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ. ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ (Pathaan) ಸಿನಿಮಾದ ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ (Deepika Padukone) ಅವರು ಕೇಸರಿ ಬಣ್ಣ ಬಿಕಿನಿ ಧರಿಸಿದ್ದನ್ನು ಒಂದು ವರ್ಗದ ಮಂದಿ ವಿರೋಧಿಸಿದ್ದಾರೆ. ‘ಇಂಥದ್ದನ್ನೆಲ್ಲ ಇನ್ನೂ ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು’ ಎಂದು ಪ್ರಕಾಶ್​ ರಾಜ್​ ಪ್ರಶ್ನೆ ಮಾಡಿದ್ದಾರೆ.

ಬಿಡುಗಡೆಯಾದ ಕ್ಷಣದಿಂದಲೂ ‘ಬೇಷರಂ ರಂಗ್​..’ ಹಾಡು ಟ್ರೆಂಡ್​ ಸೃಷ್ಟಿ ಮಾಡಿದೆ. ಯೂಟ್ಯೂಬ್​ನಲ್ಲಿ ಈವರೆಗೆ 4.2 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕಾಣಿಸಿಕೊಂಡ ರೀತಿ ಅಶ್ಲೀಲವಾಗಿದೆ ಎಂಬುದು ಕೆಲವರ ವಾದ. ಅಲ್ಲದೇ ಕೇಸರಿ ಬಣ್ಣದ ಬಿಕಿಸಿ ಧರಿಸಿ ‘ಬೇಷರಂ ರಂಗ್​’ (ನಾಚಿಕೆ ಇಲ್ಲದ ಬಣ್ಣ) ಎಂದು ಹಾಡಿರುವುದನ್ನು ಹಲವರು ಖಂಡಿಸುತ್ತಿದ್ದಾರೆ.

ಇದನ್ನೂ ಓದಿ: Deepika Padukone: ‘ಬೇಷರಂ​ ರಂಗ್​’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು

ಈ ವಿವಾದದ ಕುರಿತಾಗಿ ಪ್ರಕಟ ಆಗಿರುವ ಸುದ್ದಿಯನ್ನು ಪ್ರಕಾಶ್​ ರಾಜ್​ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ‘ಅಸಹ್ಯಕರ.. ಇದನ್ನೆಲ್ಲ ನಾವು ಇನ್ನೂ ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು? ಬಣ್ಣದ ಕುರುಡುತನ’ ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ #AndhBhakts ಮತ್ತು #justasking ಹ್ಯಾಷ್​ಟ್ಯಾಗ್​ ಬಳಸಿದ್ದಾರೆ. ಇದಕ್ಕೆ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Besharam Rang: ಹೊಸ ಹಾಡಿನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ; ‘ಪಠಾಣ್​’ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ

‘ಪಠಾಣ್​’ ಚಿತ್ರದ ಮೂಲಕ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಲು ಶಾರುಖ್​ ಖಾನ್​ ಸಜ್ಜಾಗಿದ್ದಾರೆ. ಈ ಸಿನಿಮಾ 2023ರ ಜನವರಿ 25ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಆದರೆ ಅದಕ್ಕೂ ಮುನ್ನವೇ ಈ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ಸೋಶಿಯಲ್​ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಲಾಗಿದೆ. ಟ್ವಿಟರ್​​ನಲ್ಲಿ #BoycottPathan ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗಿದೆ.

Disgusting … How long should we tolerate these ..Colour Blind #AndhBhakts .. #justasking https://t.co/SSgxKpvcE9

— Prakash Raj (@prakashraaj) December 14, 2022

#Besharam BIGOTS.. So it’s okay when Saffron clad men garland rapists..give hate speech, broker MLAs, a Saffron clad swamiji rapes Minors, But not a DRESS in a film ?? #justasking
….Protesters Burn Effigies Of SRK In Indore. Their Demand: Ban ‘Pathaan’ https://t.co/00Wa982IU4

— Prakash Raj (@prakashraaj) December 15, 2022

ಸಿದ್ದಾರ್ಥ್​ ಆನಂದ್​ ಅವರು ‘ಪಠಾಣ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾರುಖ್​ ಖಾನ್​ ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಜಾನ್​ ಅಬ್ರಾಹಂ ಅಭಿನಯಿಸಿದ್ದಾರೆ. ಟೀಸರ್​ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದರು. ಆದರೆ ‘ಬೇಷರಂ ರಂಗ್​..’ ಹಾಡು ರಿಲೀಸ್​ ಆದಾಗಿನಿಂದ ವಿವಾದ ತಲೆ ಎತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

LEAVE A REPLY

Please enter your comment!
Please enter your name here