Home Uncategorized Pro Kabaddi 2022: ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿಯನ್ನು ಮಣಿಸಿ ಸೆಮೀಸ್​ಗೆ ಲಗ್ಗೆ ಇಟ್ಟ ಬೆಂಗಳೂರು...

Pro Kabaddi 2022: ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿಯನ್ನು ಮಣಿಸಿ ಸೆಮೀಸ್​ಗೆ ಲಗ್ಗೆ ಇಟ್ಟ ಬೆಂಗಳೂರು ಗೂಳಿಗಳು

11
0

ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ತಂಡವನ್ನು ಭಾರಿ ಅಂತರದಿಂದ ಸೋಲಿಸಿ ಬೆಂಗಳುರು ಬುಲ್ಸ್‌ (Bengaluru Bulls) 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ (Pro Kabaddi 2022) ಸೆಮಿಫೈನಲ್‌ಗೆ ಪ್ರವೇಶಿಸಿದೆ. ಇಂದು(ಡಿ.13) ಮಂಗಳವಾರ ಮುಂಬೈನಲ್ಲಿ ನಡೆದ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ56-24 ಅಂಕಗಳಿಂದ ದಬಾಂಗ್‌ ಡೆಲ್ಲಿ ತಂಡವನ್ನು ಮಣಿಸಿದೆ. ಈ ಗೆಲುವಿನೊಂದಿಗೆ ಬೆಂಗಳೂರು ಗುಳಿಗಳು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ.

ಆರಂಭದಿಂದಲೇ ಆರ್ಭಟಿಸಿದ ಬೆಂಗಳೂರು ಗೂಳಿಗಳು, ದಬಾಂಗ್ ಡೆಲ್ಲಿ ತಂಡವನ್ನು ಒಟ್ಟು ನಾಲ್ಕು ಬಾರಿ ಆಲೌಟ್‌ ಮಾಡಿದವು. ರೈಡಿಂಗ್ ಹಾಗೂ ಡಿಫೆಂಡಿಂಗ್​ನಲ್ಲಿ ಆಕ್ರಮಣಕಾರಿ ಆಟವಾಡಿದ ಬೆಂಗಳೂರು ಬುಲ್ಸ್ ಅಂತಿಮವಾಗಿ ದಬಾಂಗ್ ಡೆಲ್ಲಿ ತಂಡವನ್ನು 56-24 ಅಂಕಗಳಿಂದ ಸೋಲಿಸುವ ಮೂಲಕ ಸೆಮಿಫೈನಲ್‌ ಪ್ರವೇಶಿಸಿದೆ.

ಗೂಳಿಯ ಸೇಡು

A thumping win 32 point win against Dabang Delhi takes us to the Semi Finals of vivo Pro Kabaddi Season 9

#FullChargeMaadi #BengaluruBulls #BLRvDEL #vivoProKabaddi #FantasticPanga pic.twitter.com/GoXHCzhj7A

— Bengaluru Bulls (@BengaluruBulls) December 13, 2022

ಬೆಂಗಳೂರು ಬುಲ್ಸ್, ಮೊದಲ ಅವಧಿಯ ಆಟದ ಮುಕ್ತಾಯದ ವೇಳೆಗೆ 31-15ರ ಮುನ್ನಡೆ ಕಂಡುಕೊಂಡಿತ್ತು. ಈ ಅವಧಿಯಲ್ಲಿ ಎರಡು ಬಾರಿ ಡೆಲ್ಲಿ ತಂಡವನ್ನು ಆಲೌಟ್‌ ಮಾಡಿದ್ದ ಬೆಂಗಳೂರು ಬುಲ್ಸ್‌, 2ನೇ ಅವಧಿಯ ಆಟದಲ್ಲೂ ಎರಡು ಬಾರಿ ಆಲೌಟ್‌ ಮಾಡಿತು. ಆ ಮೂಲಕ ಹಾಲಿ ಋತುವಿನಲ್ಲಿ ಡೆಲ್ಲಿ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲಿ ಬೆಂಗಳೂರು ಗೆಲುವು ಸಾಧಿಸಿರುವುದು ವಿಶೇಷ.

ರೈಡಿಂಗ್ ವಿಭಾಗದಲ್ಲಿ ಭರತ್ 15 ಅಂಕ ಮತ್ತು ವಿಕಾಸ್ ಖಂಡೋಲ 12 ಗಳಿಸಿ ಮಿಂಚಿದರೆ ಡಿಫೆಂಡಿಂಗ್ ನಲ್ಲಿ ಪೊನ್ ಪಾರ್ಥಿಬನ್ 7 ಅಂಕ ಮತ್ತು ಸೌರಭ್ ನಂದಲ್ 05 ಗಳಿಸಿ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಡೆಲ್ಲಿ ತಂಡವನ್ನು ಭಾರಿ ಅಂತರದಲ್ಲಿ ಆತ್ಮವಿಶ್ವಾದಲ್ಲಿರುವ ಬೆಂಗಳೂರು ಬುಲ್ಸ್, ಇದೇ ಗುರುವಾರ(ಡಿಸೆಂಬರ್ 15) ನಡೆಯಲಿರುವ ಉಪಾಂತ್ಯ ಕದನದಲ್ಲಿ ಬಲಿಷ್ಠ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಎದುರಿಸಲಿದೆ.

ಸೆಮೀಸ್ ಸಾರ್ವಭೌಮರು ಆಗ್ತಾರಾ ನಮ್ಮ ಗೂಳಿಗಳು

See you soon, @JaipurPanthers #FullChargeMaadi #BengaluruBulls #vivoProKabaddi #FantasticPanga pic.twitter.com/TepAxc9WQS

— Bengaluru Bulls (@BengaluruBulls) December 13, 2022

ಮತ್ತೊಂದೆಡೆ ಎರಡನೇ ಎಲಿಮಿನೇಟರ್ ಪಂದ್ಯ ಯುಪಿ ಯೋಧ ಮತ್ತು ತಮಿಳು ತಲೈವಾಸ್ ನಡುವೆ ನಡೆಯುತ್ತಿದ್ದು, ಇದರಲ್ಲಿ ಗೆದ್ದ ತಂಡ ಸೆಮಿಫೈನಲ್ ನಲ್ಲಿ ಪುಣೇರಿ ಪಲ್ಟಾನ್ ತಂಡವನ್ನು ಎದುರಿಸಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here