Home ಅಪರಾಧ ಮಂಗಳೂರಿನಲ್ಲಿ ಉಗ್ರ ಸಂಘಟನೆ ಪರ ಗೋಡೆ ಬರಹ

ಮಂಗಳೂರಿನಲ್ಲಿ ಉಗ್ರ ಸಂಘಟನೆ ಪರ ಗೋಡೆ ಬರಹ

67
0

ಮಂಗಳೂರು:

ಕಡಲ ನಗರ ಮಂಗಳೂರಿನಲ್ಲಿ ಕೆಲ ಕಿಡಿಗೇಡಿಗಳು ರಾತ್ರಿ ವೇಳೆ ಉಗ್ರ ಸಂಘಟನೆ ಪರ ಗೋಡೆ ಬರಹ ಬರೆದಿರುವ ಪ್ರಕರಣವೊಂದು ವರದಿಯಾಗಿದ್ದು ಆರೋಪಿಗಳಿಗಾಗಿ ಪೊಲಿಸರು ವ್ಯಾಪಕ ಬಲೆ ಬೀಸಿದ್ದಾರೆ.

ಸರ್ಕ್ಯೂಟ್ ಹೌಸ್ ರಸ್ತೆಯ ಅಪಾರ್ಟ್ಮೆಂಟ್ ವೊಂದರ ಕಾಂಪೌಂಡ್ನ ಮೇಲೆ ಹ್ಯಾಷ್ ಟ್ಯಾಗ್ ಹಾಕಿ, “ಲಷ್ಕರ್ ಜಿಂದಾಬಾದ್” ಎಂದು ಬರೆದು, ಸಂಘ ಪರಿವಾರದವರೇ ಸುಖಾಸುಮ್ಮನೆ ಲಷ್ಕರ್ ಮತ್ತು ತಾಲಿಬಾನ್ ಗಳನ್ನು ಆಮಂತ್ರಿಸುವಂತೆ ಮಾಡಬೇಡಿ ಎಂದು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ.

ಉಗ್ರ ಸಂಘಟನೆಗಳ ಪರ ವಿವಾದಾತ್ಮಕವಾದ ಗೋಡೆ ಬರಹ ಬರೆಯಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ನೀಡಿ, ವಿವಾದಿತ ಬರಹವನ್ನು ಅಳಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿರುವ ಸಮೀಪದ ಸಿಸಿಟಿವಿ ದೃಶ್ಯವನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here