Home Uncategorized PT Usha: ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಖ್ಯಾತ ಅಥ್ಲೀಟ್ ಪಿಟಿ ಉಷಾ ಆಯ್ಕೆ..!

PT Usha: ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಖ್ಯಾತ ಅಥ್ಲೀಟ್ ಪಿಟಿ ಉಷಾ ಆಯ್ಕೆ..!

26
0

ರೇಸ್ ಟ್ರ್ಯಾಕ್​ನಲ್ಲಿ ಭಾರತದ ಪರ ಹೊಸ ಇತಿಹಾಸ ಸೃಷ್ಟಿಸಿದ್ದ ಮಹಾನ್ ಅಥ್ಲೀಟ್ ಪಿಟಿ ಉಷಾ (PT Usha) ಇದೀಗ ತಮ್ಮ ಅಪ್ರತಿಮ ವೃತ್ತಿ ಜೀವನದಲ್ಲಿ ಹೊಸ ಸಾಧನೆ ಮಾಡಲಿದ್ದಾರೆ. ಏಷ್ಯನ್ ಗೇಮ್ಸ್​ನಲ್ಲಿ (Asian Games) ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟು, ಒಲಿಂಪಿಕ್ಸ್​ನಲ್ಲಿ (Olympics) ಭಾರತದ ಐಕಾನ್ ಎನಿಸಿಕೊಂಡಿದ್ದ ಪಿಟಿ ಉಷಾ ಅವರು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆಯಾಗಿ ಆಯ್ಕೆಯಾಗಲಿದ್ದಾರೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ (Indian Olympic Association) ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪಿ.ಟಿ.ಉಷಾ ಘೋಷಿಸಿದ್ದರು. ಈ ಹುದ್ದೆಗೆ ಉಷಾ ಅವರನ್ನು ಹೊರತುಪಡಿಸಿ ಮತ್ತ್ಯಾರು ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಪಿ.ಟಿ.ಉಷಾ ಅವರ ಅವಿರೋಧ ಆಯ್ಕೆ ಖಚಿತವಾಗಿದ್ದು, ಡಿಸೆಂಬರ್ 10 ರಂದು ಅಧಿಕೃತ ಘೋಷಣೆ ಹೊರಬೀಳಲಿದೆ.

ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಪಿಟಿ ಉಷಾ ಈ ಹುದ್ದೆಗೇರಿದ ಮೊದಲ ಮಹಿಳಾ ಅಭ್ಯರ್ಥಿ ಎನಿಸಿಕೊಳ್ಳಲಿದ್ದಾರೆ. ಡಿ.10ರಂದು ನಡೆಯಲಿರುವ ಈ ಚುನಾವಣೆಯಲ್ಲಿ ಇದುವರೆಗೆ ಪಿ.ಟಿ.ಉಷಾ ಅವರೊಬ್ಬರೇ ಅಭ್ಯರ್ಥಿಯಾಗಿದ್ದು, ಈ ಚುನಾವಣೆಗೆ ನಾಮಪತ್ರ ಸಲ್ಲಿಸುವ ಗಡುವು ನವೆಂಬರ್ 27ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ಪಿ.ಟಿ.ಉಷಾ ಅಧ್ಯಕ್ಷರಾಗುವುದು ಖಚಿತವಾಗಿದೆ. ಇದರೊಂದಿಗೆ ಕ್ರೀಡಾ ಸಂಘಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಮಾಜಿ ಆಟಗಾರ್ತಿಯರ ಪಟ್ಟಿಗೆ ಪಿಟಿ ಉಷಾ ಅವರ ಹೆಸರೂ ಸೇರ್ಪಡೆಯಾಗಲಿದೆ. ಪ್ರಸ್ತುತ, ಭಾರತೀಯ ಹಾಕಿ, ಫುಟ್‌ಬಾಲ್ ಮತ್ತು ಕ್ರಿಕೆಟ್ ಫೆಡರೇಶನ್‌ಗಳಲ್ಲಿಯೂ ಇದೇ ರೀತಿಯ ಬದಲಾವಣೆಗಳು ಸಂಭವಿಸಿವೆ.

ಪಿ.ಟಿ.ಉಷಾ ಸಾಧನೆ

ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದುಕೊಟ್ಟ 58 ವರ್ಷದ ಉಷಾ, 1984 ರ ಒಲಿಂಪಿಕ್ಸ್‌ನಲ್ಲಿ 400 ಮೀ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು.

ಇದನ್ನೂ ಓದಿ: PT Usha: ಬದುಕು ರೂಪಿಸಿದ ಗುರುವಿನ ಅಗಲಿಕೆಗೆ ಭಾವನಾತ್ಮಕ ಸಂದೇಶದ ಮೂಲಕ ವಿದಾಯ ಹೇಳಿದ ಪಿಟಿ ಉಷಾ

ವಿವಿಧ ಹುದ್ದೆಗಳಿಗೆ ಚುನಾವಣೆ

ಭಾರತದ ಹಿರಿಯ ರೇಸರ್ ಪಿಟಿ ಉಷಾ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದು, 14 ಮಂದಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಒಲಿಂಪಿಕ್ ಪದಕ ವಿಜೇತ ಗುರಿಕಾರ ಗಗನ್ ನಾರಂಗ್, ಪ್ರವರ್ತಕ ಯೋಗೇಶ್ವರ್ ದತ್ ಅವರಂತಹ ದೊಡ್ಡ ಹೆಸರುಗಳೂ ಈ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿವೆ. ಶುಕ್ರವಾರ ಮತ್ತು ಶನಿವಾರ ಅಧ್ಯಕ್ಷ ಸ್ಥಾನಕ್ಕೆ ಪಿ.ಟಿ.ಉಷಾ ಹೊರತುಪಡಿಸಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆಯ ಚುನಾವಣಾಧಿಕಾರಿ ಉಮೇಶ್ ಸಿನ್ಹಾ ತಿಳಿಸಿದ್ದಾರೆ. ಆದರೆ, 24 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ.

ಭಾರತೀಯ ಒಲಿಂಪಿಕ್ ಸಂಸ್ಥೆ

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(IOC) ಒಲಿಂಪಿಕ್ ಗೇಮ್ಸ್, ಏಷ್ಯನ್ ಗೇಮ್ಸ್ ಮತ್ತು ಇತರ ಅಂತಾರಾಷ್ಟ್ರೀಯ ಅಥ್ಲೆಟಿಕ್ ಮೀಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಮತ್ತು ಈ ಕ್ರೀಡಾಕೂಟಗಳಲ್ಲಿ ಭಾರತೀಯ ತಂಡಗಳನ್ನು ನಿರ್ವಹಿಸಲು ಕ್ರೀಡಾಪಟುಗಳ ಆಯ್ಕೆಯ ಜವಾಬ್ದಾರಿಯನ್ನು ಹೊಂದಿದೆ. ಇದು ಕಾಮನ್‌ವೆಲ್ತ್ ಗೇಮ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಆಗಿಯೂ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಈ ಸಂಸ್ಥೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಆಯ್ಕೆಯ ಜವಾಬ್ದಾರಿಯನ್ನು ಹೊಂದಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here