ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ 500 ಕೋಟಿ ರೂ. ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹಗರಣದ ತನಿಖೆ ನಡೆಸಲು ಸರ್ಕಾರ ಆದೇಶ ಹೊರಡಿಸಿದೆ. ಲೋಕೋಪಯೋಗಿ ಇಲಾಖೆ ಗುಣ ಭರವಸೆ ವಲಯ ಬೆಂಗಳೂರ ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ತನಿಖೆಗೆ ನಡೆಯಲಿದೆ.
ಸೋಮಣ್ಣ ಸೋತಿರುವ ಬೇಸರದಲ್ಲಿ ಹೇಳಿರಬಹುದು, ಒಳ್ಳೆಯ ಕಾಲ ಬಂದೇ ಬರುತ್ತದೆ: ಎನ್ ರವಿಕುಮಾರ್
ಬಿಜೆಪಿಗೆ ಬಂದು ಸೋತೆ ಎಂಬ ಮಾಜಿ ಸಚಿವ ವಿ. ಸೋಮಣ್ಣ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಕಾಲ ಇರುತ್ತದೆ. ವಾಜಪೇಯಿ, ಇಂದಿರಾಗಾಂಧಿ, ಯಡಿಯೂರಪ್ಪನವರೂ ಕೂಡಾ ಸೋತಿದ್ದರು. ಪ್ರತಿಯೊಬ್ಬರಿಗೂ ಒಂದು ಬಾರಿ ಸೋಲು, ಒಂದು ಬಾರಿ ಗೆಲುವಾಗಬಹುದು. ಬಿಜೆಪಿಗೆ ಬಂದಿದ್ದರಿಂದ ಸೋತೆ ಅಂತ ಸೋಮಣ್ಣ ಹೇಳಿರುವುದು ಅವರ ವೈಯಕ್ತಿಕ. ಇದನ್ನು ಪ್ರಮುಖರ ಜೊತೆ ಕುಳಿತು ಹಿರಿಯರು ಬಗೆಹರಿಸುತ್ತಾರೆ. ದಯನೀಯ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ಬಗ್ಗೆ ಸೋಮಣ್ಣ ಹೇಳಿದ್ದಾರೆ. ಸೋಮಣ್ಣ ಸೋತಿರುವ ಬೇಸರದಲ್ಲಿ ಹೇಳಿರಬಹುದು. ಸೋಮಣ್ಣ ಅವರಿಗೆ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದರು.
The post PWD ಇಲಾಖೆಯಲ್ಲಿ 500 ಕೋಟಿ ಹಗರಣ: ರಾಜ್ಯ ಸರ್ಕಾರದಿಂದ ತನಿಖೆಗೆ ಆದೇಶ appeared first on Ain Live News.