Home Uncategorized Rahul Gandhi; ಜಾತಿಗಣತಿಯಿಂದ ಸಮುದಾಯಗಳ ಬಗ್ಗೆ ತಿಳಿಯಲು ಸಾಧ್ಯ’: ರಾಹುಲ್​ ಗಾಂಧಿ

Rahul Gandhi; ಜಾತಿಗಣತಿಯಿಂದ ಸಮುದಾಯಗಳ ಬಗ್ಗೆ ತಿಳಿಯಲು ಸಾಧ್ಯ’: ರಾಹುಲ್​ ಗಾಂಧಿ

10
0

ಭೋಪಾಲ್ ;- ಜಾತಿಗಣತಿಯಿಂದ ಸಮುದಾಯಗಳ ಬಗ್ಗೆ ತಿಳಿಯಲು ಸಾಧ್ಯ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

ಏನೇ ಆದರೂ, ದೇಶದಲ್ಲಿ ಜಾತಿ ಗಣತಿ ನಡೆಸುವಂತೆ ಕೇಂದ್ರವನ್ನು ಕಾಂಗ್ರೆಸ್​ ಒತ್ತಾಯಿಸುತ್ತದೆ. ನೀವು ಗಾಯಗೊಂಡಾಗ ಮೊದಲು ಮಾಡುವ ಕೆಲಸವೆಂದರೆ ಅದು ಎಕ್ಸ್ ರೇ. ಎಕ್ಸ್ ರೇ ಮೂಲಕ ಮೂಳೆ ಮುರಿದಿದೆಯೇ ಅಥವಾ ಇಲ್ಲವೇ, ಎಲ್ಲಿ ಮತ್ತು ಹೇಗೆ ಮುರಿದಿದೆ ಎಂದು ನಾವು ಅದರಿಂದ ಖಚಿತಪಡಿಸಿಕೊಳ್ಳುತ್ತೇವೆ. ಅದೇ ರೀತಿ ಜಾತಿ ಗಣತಿಯು ಎಕ್ಸ್​ರೇ ರೀತಿ. ಸಮೀಕ್ಷೆ ಎಕ್ಸ್​ ಆಗಿದ್ದರೆ, ರೇ ಎಂಬುದು ಎಷ್ಟು ಜನರಿದ್ದಾರೆ ಎಂದು ಸೂಚಿಸುತ್ತದೆ. ಯಾವ ಸಮುದಾಯ, ಎಷ್ಟು ಪ್ರಮಾಣದಲ್ಲಿದೆ . ಅಧಿಕಾರ ರಚನೆಯಲ್ಲಿ ಅವರ ಪಾತ್ರವೇನು ಎಂದು ನಮಗೆ ಅದು ವಿವರಿಸುತ್ತದೆ ಎಂದರು.

ಒಬಿಸಿ, ದಲಿತರು ಮತ್ತು ಬುಡಕಟ್ಟು ಜನಾಂಗದವರ ಜೀವನ ಮಟ್ಟಗಳ ಬಗ್ಗೆ ಸತ್ಯ ತಿಳಿಯಲು ಜಾತಿ ಗಣತಿಯೆಂಬ ಎಕ್ಸ್ ರೇ ಮಾಡಬೇಕಿದೆ. ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸಲು ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂಗೀಕಾರ ಪಡೆಯಲಾಗಿದೆ ಎಂದು ರಾಹುಲ್​ ತಿಳಿಸಿದರು.

The post Rahul Gandhi; ಜಾತಿಗಣತಿಯಿಂದ ಸಮುದಾಯಗಳ ಬಗ್ಗೆ ತಿಳಿಯಲು ಸಾಧ್ಯ’: ರಾಹುಲ್​ ಗಾಂಧಿ appeared first on Ain Live News.

LEAVE A REPLY

Please enter your comment!
Please enter your name here