ಬೆಂಗಳೂರು: ರೈಲಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ರೈಲ್ವೆ ಸಿಬ್ಬಂದಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದೀಪನ್ ದಾಸ್ ಬಂಧಿತ ರೈಲ್ವೆ ಸಿಬ್ಬಂದಿಯಾಗಿದ್ದು, ಕಾಂಟ್ರಾಕ್ಟ್ ಆಧಾರದಲ್ಲಿಆರೋಪಿ ರೈಲ್ವೆಯಲ್ಲಿ ಬೆಡ್ ರೋಲರ್ ಆಗಿ ಕೆಲಸ ಮಾಡುತ್ತಿದ್ದನು.
ರಾಜಧಾನಿ ಅಗರ್ತಲದಿಂದ ಎಸ್ಎಂವಿಟಿ ಎಕ್ಸ್ಪ್ರೆಸ್ ರೈಲಿನಲ್ಲಿ ದಿಂಬು ಹಾಗೂ ಬೆಡ್ಶೀಟ್ ಒಳಗೆ ಗಾಂಜಾವನ್ನಿಟ್ಟು ಆರೋಪಿಗಳು ಸಾಗಾಟ ಮಾಡುತ್ತಿದ್ದರು.
ಇನ್ನೂ ತ್ರಿಪುರ ಮೂಲದ ಸುಮನ್, ಬೆಂಗಳೂರಿನ ಬಿಸ್ವಜಿತ್ ಪರಾರಿಯಾಗಿದ್ದಾರೆ. ಸದ್ಯ ಆರೋಪಿಗಳಿಂದ 32.88 ಕೆಜಿಯ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಪರಾರಿಯಾದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಈ ಸಂಬಂಧ ನಗರದ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.