ತಮಿಳು ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಇಂದು (ಡಿ. 12) 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಜನಿಕಾಂತ್ ಅವರ ಹುಟ್ಟು ಹಬ್ಬವನ್ನ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ. ಬೆಂಗಳೂರಿನಲ್ಲಿಯೂ ಫ್ಯಾನ್ಸ್ ಈ ವರ್ಷ ವಿಭಿನ್ನವಾಗಿ ರಜನಿಕಾಂತ್ ಅವರು ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಈ ಕುರಿತಾಗಿ ರಜನಿಕಾಂತ್ ಆಪ್ತ ಸ್ನೇಹಿತಾರದ ರಾಜ್ ಬಹದ್ದೂರ್ ಮಾತನಾಡಿದ್ದಾರೆ. ‘ಕಳೆದ ವರ್ಷ ನಟ ಪುನೀತ್ ರಾಜ್ಕುಮಾರ್ ನಿಧನದಿಂದಾಗಿ ರಜನಿಕಾಂತ್ ಹುಟ್ಟುಹಬ್ಬ ಆಚರಣೆ ಮಾಡಿರಲಿಲ್ಲ. ಆದರೆ ಈ ವರ್ಷ ವಿಜೃಂಭಣೆಯಿಂದ ಮಾಡುತ್ತಿದ್ದು, ಒಂದು ಸಾವಿರ ಬೈಕ್ ರ್ಯಾಲಿ. ಬಳಿಕ ನಾರಾಯಣ್ ಹೃದಯಾಲಯದಲ್ಲಿ ಉಚಿತ ತಪಾಸಣೆ ಮಾಡಲಾಗುವುದು’ ಎಂದು ಹೇಳಿದರು. ರಜನಿಕಾಂತ್ ಕುರಿತಾಗಿ ಮತ್ತೇನು ಹೇಳಿದರು ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
