ಮೊಹಮ್ಮದ್ ನಲಪಾಡ್‌ಗೆ ಜನವರಿ 31, 2022 ರಿಂದ ಯುವ ಕಾಂಗ್ರೆಸ್ ನೇತೃತ್ವ
ಬೆಂಗಳೂರು:
ಯುವ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಎಂ.ಆರ್. ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ ಅವರಿಗೆ 2022ರ ಜನವರಿ 31ರವರೆಗೆ ಯುವ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಿ ಸೋಮವಾರ ಆದೇಶ ಹೊರಡಿಸಿದ್ದಾರೆ.
ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಸೋಮವಾರ ಈ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದಾರೆ.
Thanking @INCIndia High Command, AICC Incharge Sri @RSSurjewala sir, @INCKarnataka president @DKShivakumar sir, CLP Leader Sri @Siddaramaiah sir, @IYC Incharge Sri @Allavaru, IYC President Sri @SrinivasIYC, and others for amicably resolving the KPYC Presidency issue. pic.twitter.com/aoa69cIPoY
— Mohammed Haris Nalapad (@nalapad) July 5, 2021
ಕಳೆದ ಜನವರಿಯಲ್ಲಿ ನಡೆದಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸಿರುವ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ( 64,203) ಜನವರಿ 31ರಂದು ಅಧ್ಯಕ್ಷ ಸ್ಥಾನ ಪಡೆಯಲಿದ್ದಾರೆ ಎಂದು ಆದೇಶ ಹೇಳಿದೆ.