ಚಂಡೀಗಢ: ಯುವಕರಿಬ್ಬರು ಹೆದ್ದಾರಿಯಲ್ಲಿ ರೀಲ್ಸ್ ಮಾಡುವಾಗ ಕ್ಯಾಂಟರ್ ವೊಂದು ಢಿಕ್ಕಿಯಾಗಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.
ಶನಿವಾರ ನುಹ್ನಲ್ಲಿ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ರೀಲ್ ಶೂಟ್ ಮಾಡುವಾಗ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 18 ವರ್ಷದ ಅಪ್ರಾಪ್ತ ಸಾವನ್ನಪ್ಪಿದ್ದು, ಆತನ ಇಬ್ಬರು ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಯುವಕರಿಬ್ಬರು ದೆಹಲಿ-ಮುಂಬೈ ಹೆದ್ದಾರಿಯಲ್ಲಿ ರೀಲ್ಸ್ ಮಾಡುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಕ್ಯಾಂಟರ್ ಯುವಕನಿಗೆ ಢಿಕ್ಕಿಯಾಗಿದೆ. ಈ ವೇಳೆ ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತನನ್ನು ನುಹ್ನ ಶಹಪುರ್ ನಂಗ್ಲಿ ಗ್ರಾಮದ ನಿವಾಸಿ ಮೊಹಮ್ಮದ್ ಮೊಯಿನ್ ಎಂದು ಗುರುತಿಸಲಾಗಿದೆ. ಅವರು ನುಹ್ನ ಖಾಸಗಿ ಶಾಲೆಯಲ್ಲಿ ಹನ್ನೆರಡನೇ ತರಗತಿ ವಿದ್ಯಾರ್ಥಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದು ನಿರ್ಬಂಧಿತ ಪ್ರದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಇಡೀ ಘಟನೆಯನ್ನು ಸ್ಥಳದಲ್ಲೇ ಸ್ನೇಹಿತರೊಬ್ಬರು ರೆಕಾರ್ಡ್ ಮಾಡುತ್ತಿದ್ದ ರೀಲ್ನಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಿದರು.
ಆಗಿದ್ದೇನು?
ಪೊಲೀಸರ ಪ್ರಕಾರ, ಶನಿವಾರ ಸಂಜೆ 4 ರಿಂದ 4.30 ರ ನಡುವೆ ಮೊಯಿನ್ ಮತ್ತು ಅವರ ಇಬ್ಬರು ಸ್ನೇಹಿತರು ಎಕ್ಸ್ಪ್ರೆಸ್ವೇ ನಲ್ಲಿ ರೀಲ್ಸ್ ಮಾಡುತ್ತಿದ್ದರು. ಮೊಯಿನ್ ಮತ್ತು ಅವರ ಸ್ನೇಹಿತ ಮೊಹಮ್ಮದ್ ಶಾದ್ ರೆಡ್ ಬುಲ್ ಎನರ್ಜಿ ಡ್ರಿಂಕ್ ಸೇವಿಸುತ್ತಾ ಎಕ್ಸ್ಪ್ರೆಸ್ವೇಯಲ್ಲಿ ನಡೆಯಲು ಪ್ರಾರಂಭಿಸಿದರು. ಈ ಇಬ್ಬರು ತಮ್ಮ ಮೂರನೇ ಸ್ನೇಹಿತನ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಮತ್ತೋರ್ವ ಸ್ನೇಹಿತ ತನ್ನ ಸ್ಮಾರ್ಟ್ಫೋನ್ನಲ್ಲಿ ರೀಲ್ಸ್ ಚಿತ್ರೀಕರಿಸುತ್ತಿದ್ದ. ಇದೇ ಸಂದರ್ಭದಲ್ಲಿ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ.
ಪರಿಣಾಮ ಹದಿಹರೆಯದವರು ಹಲವಾರು ಅಡಿಗಳಷ್ಟು ಗಾಳಿಯಲ್ಲಿ ಎಸೆಯಲ್ಪಟ್ಟರು. ಅಪಘಾತದಲ್ಲಿ ಮೊಯಿನ್ ಮೃತಪಟ್ಟರೆ, ಇಬ್ಬರು ಸ್ನೇಹಿತರು ಸಹ ಗಾಯಗೊಂಡರು. ದಾರಿಹೋಕರು ಮೂವರು ಹದಿಹರೆಯದವರನ್ನು ಮಂಡಿ ಖೇರಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ವೈದ್ಯರು ಮೊಯಿನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು, ಆದರೆ ಅವರ ಇಬ್ಬರು ಸ್ನೇಹಿತರು ಚಿಕಿತ್ಸೆ ಪಡೆಯುತ್ತಿದ್ದಾರೆ .
ಅವರು ಶೂಟಿಂಗ್ ರೀಲ್ನಲ್ಲಿ ಎಷ್ಟು ಮುಳುಗಿದ್ದರು ಎಂದರೆ, ತನ್ನ ಸ್ಮಾರ್ಟ್ಫೋನ್ನಿಂದ ರೀಲ್ ಚಿತ್ರೀಕರಿಸುತ್ತಿದ್ದವನಿಗೂ ಸಹ ಟ್ರಕ್ ಇತರ ವಾಹನಗಳನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿರುವಾಗ ಅದು ಅವರ ಕಡೆಗೆ ಬರುತ್ತಿದೆ ಎಂದು ಅರ್ಥವಾಗಲಿಲ್ಲ ಎಂದು ಸದರ್ ಫಿರೋಜ್ಪುರ್ ಝಿರ್ಕಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಸುಭಾಷ್ ಚಂದ್ ಹೇಳಿದರು.
ಯುವಕರಿಬ್ಬರು ಹೆದ್ದಾರಿಯಲ್ಲಿ ರೀಲ್ಸ್ ಮಾಡುವಾಗ ಕ್ಯಾಂಟರ್ ವೊಂದು ಢಿಕ್ಕಿಯಾಗಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಹರ್ಯಾಣದ ನುಹ್ ನ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದೆ.#Nuh #Haryana #Reels #Truck #DelhiMumbaiexpressway #Accident
Read more here: https://t.co/NS7P54DLen pic.twitter.com/6DZMYp8AIm
— kannadaprabha (@KannadaPrabha) March 15, 2026
