ಬೆಂಗಳೂರು:
ಹಿಂದೂ ವಿವಾಹ ಕಾಯ್ದೆ ಅಡಿ ದೈಹಿಕ ಸಂಪರ್ಕ ನಿರಾಕರಿಸುವುದು ಅಪರಾಧವೇ ಹೊರತು ಐಪಿಸಿ ಸೆಕ್ಷನ್ 498ಎ ಅಡಿ ದೌರ್ಜನ್ಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಆಧ್ಯಾತ್ಮಿಕ ಸಾಧನೆಯತ್ತ ಮುಖಮಾಡಿದ್ದ ಪತಿ ವಿರುದ್ಧ ಪತ್ನಿ ಐಪಿಸಿ 498 ಎ ಅಡಿ ದೂರು ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕದಸದಸ್ಯ ಪೀಠ, ಈ ಆದೇಶ ಹೊರಡಿಸಿದೆ.
ನಗರದ ಪ್ರತಿಷ್ಠಿತ ಸಂಸ್ಥೆಯೊಂದರ 33 ವರ್ಷದ ಟೆಕ್ಕಿ, ತಮ್ಮ ವಿರುದ್ಧ ಪತ್ನಿ ಐಪಿಸಿ ಸೆಕ್ಷನ್ 498(ಎ) ಅಡಿ ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ದೈಹಿಕ ಸಂಬಂಧ ನಿರಾಕರಿಸುವ ಕಾರಣಕ್ಕೆ ವಿಚ್ಚೇದನ ಪಡೆಯಬಹುದು. ಆದರೆ ಐಪಿಸಿ ಸೆಕ್ಷನ್ 498 ಎ ಅಡಿ ಇದು ಅಪರಾಧವಾಗುವುದಿಲ್ಲ ಎಂದು ಹೇಳಿದ್ದಾರೆ.
“ಗಂಡ ಬ್ರಹ್ಮಕುಮಾರಿಯ ಅನುಯಾಯಿ ಎಂಬುದು ಒಂದೇ ಆರೋಪ; ಬ್ರಹ್ಮಾಕುಮಾರಿಯಾದ ನಿಶ್ಚಿತ ಸಹೋದರಿ ಶಿವಾನಿಯ ವೀಡಿಯೊಗಳನ್ನು ಯಾವಾಗಲೂ ವೀಕ್ಷಿಸುತ್ತಿದ್ದರು; ವೀಡಿಯೋಗಳನ್ನು ನೋಡಿ ಸ್ಫೂರ್ತಿ ಪಡೆದ ಪತಿ; ದೈಹಿಕ ಪ್ರೀತಿಗಿಂತ, ಆತ್ಮಗಳ ಪ್ರೀತಿ ಮುಖ್ಯವೆನ್ನುತ್ತಿದ್ದರು.
ಮಹಿಳೆಯೊಬ್ಬರು 2019 ರ ಡಿ.18 ರಂದು ಟೆಕ್ಕಿಯೊಬ್ಬರನ್ನು ವಿವಾಹವಾಗಿದ್ದರು. ವಿವಾಹವಾಗಿ 28 ದಿನ ಜೊತೆಯಲ್ಲಿದ್ದರು. ಇದಾದ ನಂತರ ಪತಿ ಆಧ್ಯಾತ್ಮಿಕ ಸಾಧನೆಯ ಕಡೆ ಮುಖ ಮಾಡಿದ್ದಾರೆ.
ಪತಿ ತನ್ನ ಹೆಂಡತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ಎಂದಿಗೂ ಉದ್ದೇಶಿಸಿರಲಿಲ್ಲ. ಇದು ನಿಸ್ಸಂದೇಹವಾಗಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 12(1)(ಎ) ಅಡಿಯಲ್ಲಿ ಲೈಂಗಿಕತೆ ಪೂರೈಸದಿರುವುದು ಅಪರಾಧವಾಗುತ್ತದೆ. ಆದರೆ ಐಪಿಸಿ ಸೆಕ್ಷನ್ 498A ಅಡಿಯಲ್ಲಿ ವ್ಯಾಖ್ಯಾನಿಸಲಾದ ಕ್ರೌರ್ಯವಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.