ಶಿವಮೊಗ್ಗ: ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸುತ್ತಿರುವ ಬಗ್ಗೆ ಆಕ್ರೋಶದ ಮಾತುಗಳನ್ನಾಡಿದ ಎಂಪಿ ರೇಣುಕಾಚಾರ್ಯ, ಕೋರ್ ಕಮಿಟಿ ಯಾಕೇ ಬೇಕು? ರಾಜ್ಯ ಬಿಜೆಪಿ ವಿಸರ್ಜನೆ ಮಾಡಿಬಿಡಿ. ಯಡಯೂರಪ್ಪ ಬಿಟ್ಟು ಬಿಜೆಪಿ ನಿಯಂತ್ರಣ ಮಾಡಿದರೆ ಆಗುತ್ತಾ? ನಿಮ್ಮ ನಿಯಂತ್ರಣದಲ್ಲಿ ಬಿಜೆಪಿ ಬೇಕಾ? ಯಡಿಯೂರಪ್ಪ ಅವರನ್ನು ಮುಗಿಸಿದರಲ್ವ, ಈಗ ನಾಯಕತ್ವ ಎಲ್ಲಿದೆ? ಆತ್ಮಾವಲೋಕನ ಮಾಡಿಕೊಳ್ಳಿ. ರಾಜಕಾರಣದಲ್ಲಿ ಸರ್ವಾಧಿಕಾರಿ ಧೋರಣೆ ಮಾಡಬೇಡಿ.
Home remedies: ಚಳಿಗಾಲದಲ್ಲಿ ಕಿವಿ ನೋವು ನಿವಾರಿಸಲು ಇಲ್ಲಿದೆ ಮನೆಮದ್ದು!
ರಾಜ್ಯಸಭೆ, ವಿಧಾನಪರಿಷತ್ ನೇಮಕ ಆದವರು ಯಾರಿಗೋ ಮಂಡಿಯೂರಿದ್ದಾರೆ. ಹೋರಾಟ ಹಿನ್ನೆಲೆಯಿಂದ ಯಡಿಯೂರಪ್ಪ ಬಂದವರು. ನಾನು ಕೂಡ ಪಾದಯಾತ್ರೆ ಮಾಡಿ ಬಂದವನು. ರಾಜ್ಯದಲ್ಲಿ ಯಡಿಯೂರಪ್ಪ ನಿರ್ಲಕ್ಷಿಸಿದರೆ ಬಿಜೆಪಿ ಇನ್ನಷ್ಟು ನೆಲೆಕಚ್ಚುತ್ತೆ. ಯಡಿಯೂರಪ್ಪ ಒಬ್ಬ ಶಿಲ್ಪಿಯಿದ್ದಂತೆ. ನಾನೊಬ್ಬ ಕಾಡುಗಲ್ಲು ರೀತಿ ಆಗಿದ್ದೆ. ನನ್ನನ್ನು ಪರಿವರ್ತನೆ ಮಾಡಿದವರು ಯಡಿಯೂರಪ್ಪ. ಇಲ್ಲವೆಂದರೆ ಬೀಡಿ ಸೇದುತ್ತ, ಎಣ್ಣೆ ಹೊಡ್ಕೊಂಡು ಇರುತ್ತಿದ್ದೆ ಎಂದರು.
The post Renukacharya: ಯಡಿಯೂರಪ್ಪ ನಿರ್ಲಕ್ಷಿಸಿದರೆ ಬಿಜೆಪಿ ಇನ್ನಷ್ಟು ನೆಲೆಕಚ್ಚುತ್ತೆ: ರೇಣುಕಾಚಾರ್ಯ appeared first on Ain Live News.