Home Uncategorized Rohith Sharma: ವಿಶ್ವ ಕ್ರಿಕೆಟ್’ನ ದಿಗ್ಗಜರ ದಾಖಲೆಗಳೆಲ್ಲಾ ಮುರಿದು ಹೊಸ ಇತಿಹಾಸ ಬರೆದ ರೋಹಿತ್ ಶರ್ಮಾ..!

Rohith Sharma: ವಿಶ್ವ ಕ್ರಿಕೆಟ್’ನ ದಿಗ್ಗಜರ ದಾಖಲೆಗಳೆಲ್ಲಾ ಮುರಿದು ಹೊಸ ಇತಿಹಾಸ ಬರೆದ ರೋಹಿತ್ ಶರ್ಮಾ..!

35
0

ನವದೆಹಲಿ: ಟೀಂ ಇಂಡಿಯಾ (Team India) ನಾಯಕ ಹಿಟ್‌ಮ್ಯಾನ್‌ ಎಂದೇ ಖ್ಯಾತಿ ಪಡೆದಿರುವ ರೋಹಿತ್‌ ಶರ್ಮಾ (Rohith Sharma) ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಶತಕ, ಸಿಕ್ಸರ್‌ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಅಫ್ಘಾನಿಸ್ತಾನ (Afghanistan) ವಿರುದ್ಧ ಶತಕ ಸಿಡಿಸುವ ಮೂಲಕ ಏಕದಿನ ವಿಶ್ವಕಪ್‌ನಲ್ಲಿ (World Cup Cricket) 7 ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಮಗಳ ಮೇಲೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ ತಾಯಿ..! ‘ತಾಯ್ತನಕ್ಕೆ ಕಳಂಕ’ ಎಂದ ಹೈಕೋರ್ಟ್

ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ ತೆಂಡೂಲ್ಕರ್‌ 6, ಶ್ರೀಲಂಕಾದ ಕುಮಾರ ಸಂಗಕ್ಕಾರ 5, ರಿಕ್ಕಿಪಾಂಟಿಂಗ್‌ 5, ಡೇವಿಡ್‌ ವಾರ್ನರ್‌ 4, ಸೌರವ್‌ ಗಂಗೂಲಿ 4 ಶತಕ ಸಿಡಿಸಿದ್ದರು. ಟಿ20 ಶೈಲಿಯಲ್ಲಿ ಬ್ಯಾಟ್‌ ಬೀಸಿದ ರೋಹಿತ್‌ ಶರ್ಮಾ 30 ಎಸೆತದಲ್ಲಿ 50 ರನ್‌ (7 ಬೌಂಡರಿ, 2 ಸಿಕ್ಸರ್‌) ಹೊಡೆದರೆ 63 ಎಸೆತದಲ್ಲಿ 100 ರನ್‌ (12 ಬೌಂಡರಿ, 4 ಸಿಕ್ಸರ್‌) ಚಚ್ಚಿದರು. ಅಂತಿಮವಾಗಿ ರೋಹಿತ್‌ ಶರ್ಮಾ ತಂಡದ ಮೊತ್ತ 205 ಆಗಿದ್ದಾಗ 131 ರನ್‌ (84 ಎಸೆತ, 16 ಬೌಂಡರಿ, 5 ಸಿಕ್ಸರ್‌) ಸಿಡಿಸಿ ರಶೀದ್‌ ಖಾನ್‌ ಬೌಲಿಂಗ್‌ನಲ್ಲಿ ಬೌಲ್ಡ್‌ ಆಗುವ ಮೂಲಕ ಔಟಾದರು.

ಅತಿವೇಗದ 1000 ರನ್
ವಿಶ್ವಕಪ್‌ನಲ್ಲಿ ವೇಗವಾಗಿ 1000 ರನ್ ಪೂರೈಸಿದ ದಾಖಲೆಯನ್ನೂ ರೋಹಿತ್ ಶರ್ಮಾ ಮಾಡಿದ್ದಾರೆ. ಡೇವಿಡ್ ವಾರ್ನರ್ ಜೊತೆಗೆ 19 ಇನಿಂಗ್ಸ್​ಗಳಲ್ಲಿ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟರ್​ ಎಂಬ ಸಾಧನೆ ಮಾಡಿದ್ದಾರೆ.

ಭಾರತ ಪರ ಅತಿ ವೇಗದ ಶತಕ
63 ಎಸೆತಗಳಲ್ಲಿ ಶತಕ ಬಾರಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ರೋಹಿತ್‌ ಪಾತ್ರರಾಗಿದ್ದಾರೆ. ಈ ಹಿಂದೆ ಕಪಿಲ್ ದೇವ್ 72 ಎಸೆತಗಳಲ್ಲಿ ಶತಕ ಹೊಡೆದಿದ್ದರು.

ಅತಿ ಹೆಚ್ಚು ಸಿಕ್ಸರ್
ಎಲ್ಲಾ ಮಾದರಿ ಕ್ರಿಕೆಟ್​ ಸೇರಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಸಿಕ್ಸರ್​ಗಳನ್ನು ಚಚ್ಚಿದ ಆಟಗಾರನಾಗಿ ರೋಹಿತ್‌ ಹೊರಹೊಮ್ಮಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್​​ನ ​ಕ್ರಿಸ್ ಗೇಲ್ 553 ಸಿಕ್ಸರ್ (551 ಇನ್ನಿಂಗ್ಸ್) ಹೊಡೆದು ಮೊದಲ ಸ್ಥಾನದಲ್ಲಿದ್ದರು. ಈಗ ಮೂರನೇ ಸಿಕ್ಸರ್ ಬಾರಿಸುವ ಮೂಲಕ ಒಟ್ಟು 554 ಸಿಕ್ಸರ್​ಗಳೊಂದಿಗೆ ಅಗ್ರಸ್ಥಾನಕ್ಕೆ ಏರಿದ್ದಾರೆ.

The post Rohith Sharma: ವಿಶ್ವ ಕ್ರಿಕೆಟ್’ನ ದಿಗ್ಗಜರ ದಾಖಲೆಗಳೆಲ್ಲಾ ಮುರಿದು ಹೊಸ ಇತಿಹಾಸ ಬರೆದ ರೋಹಿತ್ ಶರ್ಮಾ..! appeared first on Ain Live News.

LEAVE A REPLY

Please enter your comment!
Please enter your name here