ಬೆಂಗಳೂರು:
ಸಿಸಿಬಿ, ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳ ತಂಡ ಡ್ರಗ್ ಪೆಡ್ಲರ್ ಗಳ ವಿರುದ್ದ ತಮ್ಮ ಸಮರವನ್ನು ಮುಂದುವರೆಸಿದ್ದಾರೆ.
ಬೆಂಗಳೂರು ನಗರದಲ್ಲಿ ಜಾರ್ಖಂಡ್ ಮೂಲದ ಇಬ್ಬರೂ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ, ಸುಮಾರು 2 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
CCB Anti Narcotics Wing seize Rs 2 cr worth of drugs including Ecstacy, LSD, Hash, Cannabis..procured through darknet using Bitcoins..2 accused arrested..@CPBlr @BlrCityPolice pic.twitter.com/Vq5pDbBiM0
— Sandeep Patil IPS (@ips_patil) September 3, 2021
ಬಂಧಿತರಿಂದ ಸುಮಾರು 2 ಕೋಟಿ ರೂ ಬೆಲೆ ಬಾಳುವ 150 ಎಂ.ಡಿ.ಎಂ.ಎ ಎಕ್ಸ್ ಟಸಿ ಮಾತ್ರೆಗಳು, 400 ಗ್ರಾಂ ಚರಸ್ ಉಂಡೆಗಳು, 180 ಎಲ್.ಎಸ್.ಡಿ.ಸ್ಟ್ರಿಪ್ಸ್ ಗಳು, 3520 ಗ್ರಾಂ ಹ್ಯಾಶಷ್ ಆಯಿಲ್, 50 ಗ್ರಾಂ ಹೈಡ್ರೋಗಾಂಜಾ, 30 ಕೆ.ಜಿ.ಗಾಂಜಾ, 2 ಮೊಬೈಲ್ ಫೋನ್‍ಗಳು, 2 ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.