ಧಾರವಾಡ : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕೋರ್ಟ್ ಆದೇಶ ವಿಚಾರ ನಮಗೆ ಆಘಾತ ತಂದಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ತಿಳಿಸಿದರು. ನಗರದಲ್ಲಿ ಮಾದ್ಯಮದವರ ಜೋತೆ ಮಾತನಾಡಿದ ಅವರು, ರಾಜ್ಯದಿಂದ ಮತ್ತೇ ಕಾವೇರಿ ನೀರು ತಮಿಳುನಾಡಿಗೆ ಹರಿಸಲು ನಮ್ಮಲ್ಲಿ ನೀರಿಲ್ಲ, ಈ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಸರ್ಕಾರ ಮಾಡಿದೆ. ಮುಂದಿನ ದಿನಗಳಲ್ಲಿ ಏನು ಮಾಡಬೇಕು ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸುತ್ತಾರೆ ಎಂದು ತಿಳಿಸಿದರು.
ಕಾವೇರಿ ವಿಚಾರದಲ್ಲಿ ಪ್ರಧಾನ ಮಂತ್ರಿ ಯಾಕೆ ಮಧ್ಯಪ್ರವೇಶಿಸುತ್ತಿಲ್ಲ? ಕೇಂದ್ರ ಸಚಿವರುಗಳು ಯಾಕೆ ಮಧ್ಯಸ್ಥಿಕೆ ವಹಿಸುತ್ತಿಲ್ಲ, ನಮ್ಮ ಸಂಸದರು ಏನು ಮಾಡುತ್ತಿದ್ದಾರೆ..? ಅವರ ಮೇಲೆಯೂ ಜವಾಬ್ದಾರಿ ಇದೆ ಅಲ್ವಾ..? ಎಂದು ಪ್ರಶ್ನಿಸಿದರು.
ಮಗಳ ಮೇಲೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ ತಾಯಿ..! ‘ತಾಯ್ತನಕ್ಕೆ ಕಳಂಕ’ ಎಂದ ಹೈಕೋರ್ಟ್
ಕಾಂಗ್ರೆಸ್ ಸರ್ಕಾರ ಬಂದಿದೆಯೆಂದು ಕೇಂದ್ರ ಸಚಿವರು ಹಾಗೂ ಸಂಸದರು ದೂರ ಹೋಗುವುದು ಸರಿಯಲ್ಲ, ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಗೆ ರಾಜ್ಯ ನಿಯೋಗ ಹೋಗಲು ಸಮಯ ಕೇಳಿದ್ದೇವೆ, ಸರ್ವ ಪಕ್ಷಗಳ ಸಭೆಗೂ ಸಮಯ ಕೇಳಿದ್ದೇವೆ.
ಇಲ್ಲಿಯವರೆಗೂ ಸಮಯ ಕೊಟ್ಟಿಲ್ಲ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಅಲ್ವಾ? ನಮ್ಮ ಕೇಂದ್ರ ಮಂತ್ರಿಗಳು,ಎಂಪಿ ಗಳು ರಾಜಕಾರಣ ಮಾಡುತ್ತಿಲ್ಲವಾ? ಎಂದು ಬಿಜೆಪಿಗೆ ಪ್ರಶ್ನಿಸಿದರು. ರಾಜ್ಯಕ್ಕೆ ಅನ್ಯಾಯವಾಗದಂತೆ ಕಾವೇರಿ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡಬೇಕಿದೆ, ಪ್ರಧಾನಿಗಳು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಆಗ್ರಹಿಸಿದರು.
The post Salim Ahmed: ಕಾವೇರಿ ನೀರು ಹರಿಸುವಂತೆ ಕೋರ್ಟ್ ಆದೇಶ ಆಘಾತ ತಂದಿದೆ: ಸಲೀಂ ಅಹ್ಮದ್ appeared first on Ain Live News.