Home ಬೆಂಗಳೂರು ನಗರ ಅಕ್ರಮವಾಗಿ ಚಿನ್ನ ಸಾಗಾಟ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಯಾಂಡಲ್‌ ವುಡ್‌ ನಟಿ ಅರೆಸ್ಟ್

ಅಕ್ರಮವಾಗಿ ಚಿನ್ನ ಸಾಗಾಟ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಯಾಂಡಲ್‌ ವುಡ್‌ ನಟಿ ಅರೆಸ್ಟ್

12
0

ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಆರೋಪದ ಮೇಲೆ ನಟಿ ರನ್ಯಾ ರಾವ್‌ ಅರೆಸ್ಟ್‌ ಆಗಿದ್ದಾರೆ. ವಿದೇಶದಿಂದ 14.8 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಡಿಆರ್​ಐ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

ನಟಿ ರನ್ಯಾ ರಾವ್ ಡಿಜಿಪಿ ರಾಮಚಂದ್ರ ರಾವ್ ಸಂಬಂಧಿಯಾಗಿದ್ದಾರೆ. ರನ್ಯಾ ದುಬೈನಿಂದ ಬೆಂಗಳೂರಿಗೆ ಮಾರ್ಚ್ 3ರ ರಾತ್ರಿ ಮರಳಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಏರ್​ಪೋರ್ಟ್​ ಕಸ್ಟಮ್ಸ್​ನ ಡಿಆರ್​ಐ ಅಧಿಕಾರಿಗಳು ರನ್ಯಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದ  ಆರೋಪ ರನ್ಯಾ ಮೇಲೆ ಇದೆ. ರನ್ಯಾ, ಕನ್ನಡದ ‘ಮಾಣಿಕ್ಯ’ ಚಿತ್ರದ ನಾಯಕಿಯಾಗಿ ನಟಿಸಿದ್ದರು.

LEAVE A REPLY

Please enter your comment!
Please enter your name here