ಬೆಂಗಳೂರು:
ಕೋವಿಡ್ ಸೋಂಕಿನ ಕಾರಣದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಎಐಎಡಿಎಂಕೆ ಮಾಜಿ ನಾಯಕಿ ಹಾಗೂ ಮಾಜಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತೆ ವಿ.ಕೆ ಶಶಿಕಲಾ ಭಾನುವಾರ ಬಿಡುಗಡೆ ಹೊಂದಿದ್ದಾರೆ.
ಭಾರೀ ಭದ್ರತೆಯ ನಡುವೆ ಶಶಿಕಲಾ, ಮಾಸ್ಕ್ ಧರಿಸಿ, ಹೊರಬಂದರು. ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಆಸ್ಪತ್ರೆಯ ಹೊರಗೆ ಜಮಾಯಿಸಿ, ಅವರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಎಂ.ಎಸ್.ಶಶಿಕಲಾ ಅವರ ಸೋದರಳಿಯ ಮತ್ತು ಎ.ಎಂ.ಎಂ.ಕೆ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಚೆನ್ನೈ ಆರ್.ಕೆ.ನಗರ ಶಾಸಕ ಟಿಟಿವಿ ದಿನಕರನ್ ಉಪಸ್ಥಿತರಿದ್ದರು.
ವೈದ್ಯರಿಂದ ಸಲಹೆಯಂತೆ ಶಶಿಕಲಾ ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಒಂದು ವಾರದ ಅವಧಿಗೆ ನಗರದ ಫಾರ್ಮ್ ಹೌಸ್‌ನಲ್ಲಿ ಇರಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ರಮೇಶ್ ಕೃಷ್ಣ ಕೆ,
ಶಶಿಕಲಾ ಅವರು 10 ದಿನಗಳ ಚಿಕಿತ್ಸೆ ಪಡೆದಿದ್ದಾರೆ. ಪ್ರೋಟೋಕಾಲ್ ಪ್ರಕಾರ, ಬಿಡುಗಡೆಗೆ ಮೊದಲು ಅವರನ್ನು ಪರೀಕ್ಷಿಸುವ ಅಗತ್ಯವಿಲ್ಲ ಎಂದಿದ್ದಾರೆ.