Home Uncategorized SBI FD Interest Rates: ಎಫ್​​ಡಿ ಬಡ್ಡಿ ದರ ಹೆಚ್ಚಿಸಿದ ಎಸ್​ಬಿಐ; ವಿವರ ಇಲ್ಲಿದೆ

SBI FD Interest Rates: ಎಫ್​​ಡಿ ಬಡ್ಡಿ ದರ ಹೆಚ್ಚಿಸಿದ ಎಸ್​ಬಿಐ; ವಿವರ ಇಲ್ಲಿದೆ

11
0

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಿವಿಧ ಅವಧಿಯ ಸ್ಥಿರ ಠೇವಣಿ (FD) ಬಡ್ಡಿ ದರವನ್ನು ಹೆಚ್ಚಳ ಮಾಡಿದೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್​ಡಿ ದರ ಹೆಚ್ಚಳ ಮಾಡಲಾಗಿದ್ದು, ಇಂದಿನಿಂದಲೇ (December 13) ಅನ್ವಯವಾಗಲಿದೆ. ಪರಿಷ್ಕೃತ ಬಡ್ಡಿ ದರ ಹೊಸ ಎಫ್​ಡಿಗಳಿಗೆ ಮತ್ತು ರಿನೀವಲ್ ಆಗುವ ಠೇವಣಿಗಳಿಗೆ ಅನ್ವಯವಾಗಲಿದೆ. ಈ ಹಿಂದೆ ಅಕ್ಟೋಬರ್ 22ರಂದು ಎಸ್​ಬಿಐ ಬಡ್ಡಿ ದರ ಪರಿಷ್ಕರಿಸಿತ್ತು. ಈ ವಿಚಾರವಾಗಿ ಎಸ್​ಬಿಐ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗಿದೆ. ಭಾರೀ ಮೊತ್ತದ ಠೇವಣಿಗಳ ಬಡ್ಡಿ ದರವನ್ನು ಎಸ್​ಬಿಐ 50ರಿಂದ 100 ಮೂಲಾಂಶದಷ್ಟು ಹೆಚ್ಚಳ ಮಾಡಿದೆ. ಆರ್​ಬಿಐ ಇತ್ತೀಚೆಗಷ್ಟೇ ರೆಪೊ ದರದಲ್ಲಿ 35 ಮೂಲಾಂಶ ಹೆಚ್ಚಳ ಮಾಡಿ ರೆಪೊ ದರವನ್ನು ಶೇಕಡಾ 6.25ರ ಮಟ್ಟಕ್ಕೆ ತಂದು ನಿಲ್ಲಿಸಿತ್ತು. ಇದರ ಬೆನ್ನಲ್ಲೇ ಬ್ಯಾಂಕ್​ಗಳು ಠೇವಣಿಗಳ ಮೇಲಿನ ಬಡ್ಡಿ ದರ ಮತ್ತು ಸಾಲದ ಬಡ್ಡಿ ದರಗಳನ್ನು ಪರಿಷ್ಕರಿಸುತ್ತಿವೆ.

ಎಸ್​ಬಿಐ ಪರಿಷ್ಕೃತ ಎಫ್​ಡಿ ಬಡ್ಡಿ ದರ ವಿವರ

7ರಿಂದ 45 ದಿನಗಳ ಅವಧಿಯ ಎಫ್​ಡಿ – 3%
46ರಿಂದ 179 ದಿನಗಳ ಅವಧಿಯ ಎಫ್​ಡಿ – 4.5%
180ರಿಂದ 210 ದಿನಗಳ ಅವಧಿಯ ಎಫ್​ಡಿ – 5.25%
211 ದಿನಗಳಿಂದ 1 ವರ್ಷದ ನಡುವಣ ಅವಧಿಯ ಎಫ್​ಡಿ – 5.75%
1 ವರ್ಷದಿಂದ 2 ವರ್ಷ ನಡುವಣ ಅವಧಿಯ ಎಫ್​ಡಿ – 6.75%
2 ವರ್ಷಕ್ಕಿಂತ ಮೇಲ್ಪಟ್ಟ, 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿ – 6.75%
3 ವರ್ಷ ಮೇಲ್ಪಟ್ಟ ಹಾಗೂ 5 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿ – 6.25%
5 ವರ್ಷ ಮತ್ತು 10 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿ – 6.25%

ಹಿರಿಯ ನಾಗರಿಕರ ಎಫ್​ಡಿಗೂ ಹೆಚ್ಚು ಬಡ್ಡಿ

ಹಿರಿಯ ನಾಗರಿಕರ ಎಫ್​ಡಿ ಮೇಲಿನ ಬಡ್ಡಿ ದರವನ್ನು ಎಸ್​​ಬಿಐ 50 ಮೂಲಾಂಶದಷ್ಟು ಹೆಚ್ಚಳ ಮಾಡಿದೆ. ಒಟ್ಟಾರೆಯಾಗಿ 7 ದಿನಗಳಿಂದ ತೊಡಗಿ 10 ವರ್ಷಗಳ ವರೆಗಿನ ಎಫ್​ಡಿಗಳ ಬಡ್ಡಿ ಶೇಕಡಾ 3.5ರಿಂದ ತೊಡಗಿ ಶೇಕಡಾ 7.25ರ ವರೆಗೆ ಇದೆ.

ಇದನ್ನೂ ಓದಿ: Gift Tax: ಸಂಗಾತಿಗೆ ಉಡುಗೊರೆ ನೀಡಿದ ಹಣಕ್ಕೂ ತೆರಿಗೆ ಪಾವತಿಸಬೇಕೇ? ಇಲ್ಲಿದೆ ತಜ್ಞರ ಉತ್ತರ

ಹಿರಿಯ ನಾಗರಿಕರ ಪರಿಷ್ಕೃತ ಎಫ್​ಡಿ ಬಡ್ಡಿ ದರ

7ರಿಂದ 45 ದಿನಗಳ ಅವಧಿಯ ಎಫ್​ಡಿ – 3.50%
46ರಿಂದ 179 ದಿನಗಳ ಅವಧಿಯ ಎಫ್​ಡಿ – 5%
180ರಿಂದ 210 ದಿನಗಳ ಅವಧಿಯ ಎಫ್​ಡಿ – 5.75%
211 ದಿನಗಳಿಂದ 1 ವರ್ಷದ ನಡುವಣ ಅವಧಿಯ ಎಫ್​ಡಿ – 6.25%
1 ವರ್ಷದಿಂದ 2 ವರ್ಷ ನಡುವಣ ಅವಧಿಯ ಎಫ್​ಡಿ – 7.25%
2 ವರ್ಷಕ್ಕಿಂತ ಮೇಲ್ಪಟ್ಟ, 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿ – 7.25%
3 ವರ್ಷ ಮೇಲ್ಪಟ್ಟ ಹಾಗೂ 5 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿ – 6.75%
5 ವರ್ಷ ಮತ್ತು 10 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿ – 7.25%

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here