ಬೆಂಗಳೂರು:
2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ನಾಳೆ (ಶುಕ್ರವಾರ) ಪ್ರಕಟವಾಗಲಿದೆ.
ಫಲಿತಾಂಶ ಘೋಷಣೆ ಸಂಬಂಧ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಾಳೆ ಬೆಳಿಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ಕರೆಯಲಾಗಿದ್ದು, 11 ಗಂಟೆಯ ನಂತರ ಜಾಲತಾಣ https:// karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
2022-23ನೇ ಶೈಕ್ಷಣಿಕ ಸಾಲಿನಲ್ಲಿ 7,27,387 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ರಾಜ್ಯದ 1,109 ಕೇಂದ್ರಗಳಲ್ಲಿ ಮಾರ್ಚ್ 9 ರಿಂದ ಏಪ್ರಿಲ್ 29ರವರೆಗೂ ಫರೀಕ್ಷೆಗಳು ನಡೆದಿದ್ದವು.
ವಿದ್ಯಾರ್ಥಿಗಳು 11 ಗಂಟೆಯ ನಂತರ ಅಧಿಕೃತ ಜಾಲತಾಣ ಪರಿಶೀಲನೆ ಮಾಡುವ ಮೂಲಕ ತಮ್ಮ ಫಲಿತಾಂಶವನ್ನು ಪಡೆಯಬಹುದಾಗಿದೆ.