
ಬೆಂಗಳೂರು:
ಸಿಎಂ ಸಿದ್ದರಾಮಯ್ಯ ಅವರ 14ನೇ ಬಜೆಟ್ ಮಂಡನೆ ವೇಳೆ ವಿಧಾನಸಭೆಯಲ್ಲಿ ಭದ್ರತಾ ಲೋಪವಾಗಿರುವುದು ಇದೀಗ ಬೆಳಕಿಗೆ ಬಂದಿದೆ. ಇಂದು ವಿಧಾನಸಭೆ ಪ್ರವೇಶ ಮಾಡಿರುವ ಅನಾಮಿಕ ವ್ಯಕ್ತಿ ಸುಮಾರು ಹದಿನೈದು ನಿಮಿಷಗಳ ಕಾಲ ಸದನದಲ್ಲಿ ಕುಳಿತುಕೊಂಡಿದ್ದಾರೆ. ಅವನ ಹೆಸರು ತಿಪ್ಪೆರುದ್ರ ಮತ್ತು ಅವನು ಚಿತ್ರದುರ್ಗದ ನಿವಾಸಿ.
ದೇವದುರ್ಗ ಶಾಸಕಿ ಕರೆಯಮ್ಮ ಜಾಗದಲ್ಲಿ ಈ ಅನಾಮಿಕ ವ್ಯಕ್ತಿ ಕೂತಿದ್ದು, ಇದನ್ನು ಗಮನಿಸಿದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಸ್ಪೀಕರ್ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಒಬ್ಬ ವ್ಯಕ್ತಿ ಬಂದು ಸದನಲ್ಲಿ 15 ನಿಮಿಷ ಕುಳಿತಿದ್ದು, ಆತ ಮೊಳಕಾಲ್ಮೂರು ಶಾಸಕ ಎಂದು ಹೇಳಿಕೊಂಡಿದ್ದಾನೆ, ನಂತರ 15 ನಿಮಿಷದಲ್ಲಿ ಆತ ನಾಪತ್ತೆಯಾಗಿದ್ದಾನೆ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದ್ದಾರೆ.