Home ಬೆಂಗಳೂರು ನಗರ Self Employed Brahmins to get up to Rs. 5 lakh Govt subsidy:...

Self Employed Brahmins to get up to Rs. 5 lakh Govt subsidy: Krishna Byre Gowda| ಸ್ವಯಂ ಉದ್ಯೋಗಿ ಬ್ರಾಹ್ಮಣರಿಗೆ ರೂ. 5 ಲಕ್ಷದವರೆಗೆ ಸರ್ಕಾರಿ ಸಹಾಯಧನ, ಬಡವರು ಬಳಸಿಕೊಳ್ಳಿ: ಕೃಷ್ಣ ಬೈರೇಗೌಡ

32
0
Self Employed Brahmins to get up to Rs. 5 lakh Govt subsidy: Krishna Byre Gowda
  • ವಿದ್ಯಾರ್ಥಿಗಳಿಗೆ 1 ಲಕ್ಷದ ವರೆಗೆ ಸಾಂದೀಪಿನಿ ಶಿಷ್ಯ ವೇತನ
  • ಶಿಷ್ಯ ವೇತನ, ಸ್ವಾವಲಂಬಿ ಯೋಜನೆಗಡ ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನ
  • ಅರ್ಹರು ಉಪಯೋಗ ಪಡೆದುಕೊಳ್ಳಿ: ಸಚಿವರ ಕರೆ

ಬೆಂಗಳೂರು:

ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳ ಶ್ರೇಯೋಭಿವೃದ್ದಿಗಾಗಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೀಡುವ ಸ್ವಾವಲಂಭಿ ಮತ್ತು ಸಾಂದೀಪಿನಿ ಶಿಷ್ಯ ವೇತನದ ಯೋಜನೆಗಳ ಉಪಯೋಗವನ್ನು ಅರ್ಹರು ಪಡೆದುಕೊಳ್ಳಿ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ತಮ್ಮ ಕಚೇರಿಯಲ್ಲಿ ನಿಗಮದ ಡಿಬಿಟಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, “ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳು ಸ್ವಯಂ ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳಿಗಾಗಿ ಬ್ಯಾಂಕ್ ನಿಂದ ಸಾಲ ಪಡೆದಿದ್ದಲ್ಲಿ, ಸಾಲದ ಪೈಕಿ ಶೇ. 20 ರಷ್ಟು ಹಣವನ್ನು ಸರ್ಕಾರ “ಸ್ವಾವಲಂಭಿ” ಯೋಜನೆ ಅಡಿಯಲ್ಲಿ ಸಹಾಯಧನ ನೀಡಲಿದೆ.

ಗರಿಷ್ಠ 5 ಲಕ್ಷದ ವರೆಗೆ ಸಹಾಯಧನ ನೀಡಲಾಗುವುದು. ವ್ಯಾಪಾರ, ಅಂಗಡಿ, ಹೈನುಗಾರಿಕೆ, ಹೊಲಿಗೆ ವೃತ್ತಿ, ಆಟಿಕೆ ತಯಾರಿಕೆ, ಮೊಬೈಲ್ ಅಂಗಡಿ, ಗುಡಿ ಕೈಗಾರಿಕೆ ಸೇರಿದಂತೆ ಹೆಚ್ಚಿನ ಘಟಕ ವೆಚ್ಚವಿರುವ ಆದಾಯ ಬರುವಂತಹ ಲಾಭದಾಯಕ ಉದ್ಯಮಗಳನ್ನು ಸ್ಥಾಪಿಸಲು ರಾಷ್ತ್ರೀಕೃತ ಬ್ಯಾಂಕ್ ಗಳಿ‌ಂದ ಸಾಲ ಪಡೆದವರು ಈ ಯೋಜನೆ ಅರ್ಹರಾಗಿರುತ್ತಾರೆ. ಜನವರಿ 31 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಅರ್ಹರು ಇದರ ಉಪಯೋಗ ಪಡೆದುಕೊಳ್ಳಿ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಸಾಂದೀಪಿನಿ ಶಿಷ್ಯ ವೇತನ:

ಮೆಟ್ರಿಕ್ ನಂತರದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ಬ್ರಾಹ್ಮಣ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ 15,000 ರೂ. ವರೆಗೆ “ಸಾಂದೀಪಿನಿ” ಯೋಜನೆ ಅಡಿ ಶಿಷ್ಯ ವೇತನ ನೀಡಲಾಗುವುದು.

ಯುಜಿ/ಪಿಜಿ ಸೇರಿದಂತೆ ವಿವಿಧ ಕೋರ್ಸ್ ಗಳಿಗೆ ಸಿಇಟಿ ಪ್ರವೇಶ ಪರೀಕ್ಷೆ ಮೂಲಕ ತೇರ್ಗಡೆಯಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ, ದಾಖಲಾತಿ ಶುಲ್ಕದ ಮೊತ್ತದ 2/3 ಭಾಗ ಹಾಗೂ ಗರಿಷ್ಠ ರೂ. 1 ಲಕ್ಷದ ವರೆಗೆ ಬ್ರಾಹ್ಮಣ ಅಭಿವೃದ್ಧಿ ನಿಗಮದ ಮೂಲಕ ಸರ್ಕಾರ ಪಾವತಿಸಲಿದೆ. ಸದರಿ ಯೋಜನೆಗೆ ಅರ್ಜಿ ಸಲ್ಲಿಸಲು ಜನವರಿ.31 ಕೊನೆಯ ದಿನವಾಗಿರಲಿದೆ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here