Home ಬೆಂಗಳೂರು ನಗರ ಗೃಹ ಲಕ್ಷ್ಮಿ ಯೋಜನೆಗೆ ಪ್ರತ್ಯೇಕ ಆ್ಯಪ್; ಬುಧವಾರ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ

ಗೃಹ ಲಕ್ಷ್ಮಿ ಯೋಜನೆಗೆ ಪ್ರತ್ಯೇಕ ಆ್ಯಪ್; ಬುಧವಾರ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ

29
0
separate App for Gruha Lakshmi Scheme; final decision will be taken in Wednesday's cabinet meeting
separate App for Gruha Lakshmi Scheme; final decision will be taken in Wednesday's cabinet meeting

ಬೆಂಗಳೂರು:

ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ‘ಗೃಹಲಕ್ಷ್ಮಿ’ ಯೋಜನೆಗೆ ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ರೂಪು ರೇಷೆ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಡಿಸಿಎಂ ಡಿಕೆ ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಗೃಹ ಲಕ್ಷ್ಮಿ ಯೋಜನೆಗೆ ಪ್ರತ್ಯೇಕ ಆ್ಯಪ್ ತಯಾರಾಗಿದ್ದು, ಈ ಕುರಿತು ಸಿಎಂ ಜೊತೆ ಚರ್ಚೆ ನಡೆಸಲಾಗುವುದು ಎಂದರು.

ಅಧಿಕಾರಿಗಳು ಮತ್ತು ಸಚಿವರ ಜೊತೆ ಸುದೀರ್ಘ ಸಭೆ ನಡೆಸಲಾಗಿದೆ. ಯಾವತ್ತು ಅರ್ಜಿ ಸ್ವೀಕಾರ ಮಾಡಬೇಕು ಎಂದು ನಿರ್ಧಾರ ಮಾಡುತ್ತೇವೆ. ಸಿಎಂ ಗಮನಕ್ಕೆ ತಂದು ಅರ್ಜಿ ಸ್ವೀಕಾರ ಮಾಡುತ್ತೇವೆ ಎಂದು ಹೇಳಿದರು. ಆಗಸ್ಟ್ ತಿಂಗಳಲ್ಲಿ ಯೋಜನೆ ಜಾರಿಗೆ ಬರುತ್ತೆ. ಸೇವಾಸಿಂಧು ಸರ್ವರ್ ಗೆ ಓವರ್ ಲೋಡ್ ಆಗುತ್ತಿದೆ. ಅಪ್ಡೇಟ್ ಆದ್ರೂ ಕೂಡ ಸಮಸ್ಯೆ ಆಗುತ್ತಿದೆ. ಇದಕ್ಕೆಲ್ಲಾ ಆ್ಯಪ್ ನಲ್ಲಿ ಪರಿಹಾರ ಸಿಗಲಿದೆ ಎಂದು ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ಸಂಪುಟ ಸಭೆಯಲ್ಲಿ ಆ್ಯಪ್ಲಿಕೇಷನ್ ಸಿಎಂಗೆ ತೋರಿಸಿ ಅಂತಿಮ ದಿನಾಂಕ ಘೋಷಣೆ ಮಾಡ್ತೇವೆ. ಕಂದಾಯ ಸಚಿವರು ನಾಡಕಚೇರಿ, ತಹಶಿಲ್ದಾರರ ಕಚೇರಿ ಬಗ್ಗೆ ಗಮನ ಹರಿಸ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವರ ಅಡಿ ಬಾಪೂಜಿ ಕೇಂದ್ರಗಳು ಬರುತ್ತವೆ. ಹೀಗಾಗಿ ಮೂವರು ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.

ಗೃಹ ಜ್ಯೋತಿ ಯೋಜನೆದು ಒಂದೇ ಸಾರಿ ಓವರ್ ಲೋಡ್ ಆಗ್ತಾ ಇತ್ತು. ಲಕ್ಷಾಂತರ ಜನ ಅರ್ಜಿ ಹಾಕಿದ್ದರಿಂದ ಓವರ್ ಲೋಡ್ ಆಗಿತ್ತು. ಇದೀಗ ಗೃಹ ಜ್ಯೋತಿ ಸ್ಟೇಬಲ್ ಆಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಇಂದು ಒಂದೇ ದಿನ ಗೃಹ ಜ್ಯೋತಿ ಗೆ ಆರು ಲಕ್ಷ ಮಂದಿ ಅರ್ಜಿ ಹಾಕಿದ್ದಾರೆ. ಅದೇ ರೀತಿ ಗೃಹ ಲಕ್ಷ್ಮಿ ಕೂಡ ಸ್ಟೇಬಲ್ ಆಗಿರುವಂತೆ ನೋಡಿಕೊಳ್ಳುತ್ತೇವೆ ಎಂದರು.

ಗೃಹ ಲಕ್ಷ್ಮಿ ಗಾಗಿ ಪ್ರಜಾಪ್ರತಿನಿಧಿ ಆಯ್ಕೆ ಮಾಡ್ತೇವೆ. ಕ್ಯಾಬಿನೇಟ್ ನಲ್ಲೂ ಪ್ರಜಾಪ್ರತಿನಿಧಿ ಆಯ್ಕೆ ಅಂತಿಮ ನಿರ್ಧಾರ ಆಗತ್ತೆ. ಸಾವಿರ ಜನರಿಗೆ ಇಬ್ಬರು ಪ್ರಜಾಪ್ರತಿನಿಧಿ ಆಯ್ಕೆ ಮಾಡುವ ಕುರಿತು ಚರ್ಚೆ ಮಾಡಿದ್ದೇವೆ ಎಂದರು. ಟೈಂ ಬೌಂಡ್ ಇದಕ್ಕೆ ಇಲ್ಲ, ಹೀಗಾಗಿ ರಶ್ ಮಾಡಿಕೊಳ್ಳಲು ಹೋಗಬೇಡಿ ಎಂದು ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಮಾಡಿದರು.

LEAVE A REPLY

Please enter your comment!
Please enter your name here