Seven arrested for Moral Policing in Mangaluru
ಮಂಗಳೂರು:
ಇಲ್ಲಿನ ಸೋಮೇಶ್ವರ ಬೀಚ್‌ನಲ್ಲಿ ಅನ್ಯ ಧರ್ಮದ ಯುವತಿಯರ ಜೊತೆಯಲ್ಲಿದ್ದ ಕೇರಳದ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಸಂಜೆ ತಂಡ ನಡೆಸಿದ ದಾಳಿಯಲ್ಲಿ ನೆರೆ ರಾಜ್ಯದ ಮೂವರು ಅರೆವೈದ್ಯಕೀಯ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ತಮ್ಮ ಕಾಲೇಜು ಸಹಪಾಠಿಗಳಾಗಿರುವ ಮೂವರು ಯುವತಿಯರೊಂದಿಗೆ ಬೀಚ್‌ಗೆ ಭೇಟಿ ನೀಡಿದ್ದರು. ಅನ್ಯ ಧರ್ಮದ ಯುವತಿಯರ ಜೊತೆಯಲ್ಲಿದ್ದ ಕಾರಣಕ್ಕೆ ಗುಂಪೊಂದು ಯುವಕರ ಮೇಲೆ ಮೇಲೆ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಕೋರರ ಪತ್ತೆಗೆ ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ.
