Home Uncategorized Shah Rukh Khan: ‘ಪಠಾಣ್​’ ಚಿತ್ರ ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್​ ಮಾಡಲಿದೆ? ಶಾರುಖ್​...

Shah Rukh Khan: ‘ಪಠಾಣ್​’ ಚಿತ್ರ ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್​ ಮಾಡಲಿದೆ? ಶಾರುಖ್​ ಖಾನ್​ಗೆ ನೇರ ಪ್ರಶ್ನೆ

24
0

ಬಹುನಿರೀಕ್ಷಿತ ‘ಪಠಾಣ್​’ (Pathaan Movie) ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದೆ. ಅಭಿಮಾನಿಗಳಿಗೆ ಈ ಸಿನಿಮಾ ಮೇಲಿನ ಕ್ರೇಜ್​ ಜೋರಾಗಿದೆ. ಟೀಸರ್​ ಮತ್ತು ಹಾಡಿನ ಮೂಲಕ ಈ ಚಿತ್ರ ಹೈಪ್​ ಸೃಷ್ಟಿ ಮಾಡಿದೆ. ದೊಡ್ಡ ಗ್ಯಾಪ್​ ಬಳಿಕ ಶಾರುಖ್​ ಖಾನ್​ (Shah Rukh Khan) ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಲಿರುವುದರಿಂದ ಅಭಿಮಾನಿಗಳಿಗೆ ಕೌತುಕ ಹೆಚ್ಚಾಗಿದೆ. ಒಂದೆಡೆ ಅಭಿಮಾನಿಗಳು ‘ಪಠಾಣ್​’ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಇನ್ನೊಂದೆಡೆ ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ ಇದರ ಬಾಕ್ಸ್​ ಆಫೀಸ್​ (Pathaan Movie Box Office Collection) ಭವಿಷ್ಯ ಏನಾಗಬಹುದು ಎಂದು ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಮೂಡಿದೆ. ಇದೇ ಪ್ರಶ್ನೆಯನ್ನು ಅಭಿಮಾನಿಯೊಬ್ಬರು ಶಾರುಖ್​ ಖಾನ್​ಗೆ ನೇರವಾಗಿ ಕೇಳಿದ್ದಾರೆ. ಅದಕ್ಕೆ ಶಾರುಖ್​ ಖಾನ್​ ಅವರ ಜಾಣತನದ ಉತ್ತರ ನೀಡಿದ್ದಾರೆ.

ಸಿನಿಮಾ ಪ್ರಚಾರದ ಸಲುವಾಗಿ ಸೋಶಿಯಲ್​ ಮೀಡಿಯಾದಲ್ಲಿ ಶಾರುಖ್​ ಖಾನ್​ ಅವರು ಅಭಿಮಾನಿಗಳ ಜೊತೆ ಇತ್ತೀಚೆಗೆ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಫ್ಯಾನ್ಸ್​ ಬಗೆಬಗೆಯ ಪ್ರಶ್ನೆ ಎಸೆದಿದ್ದಾರೆ. ‘ಪಠಾಣ್​ ಸಿನಿಮಾ ಮೊದಲು ದಿನ ಎಷ್ಟು ಕಲೆಕ್ಷನ್​ ಮಾಡಬಹುದು’ ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಶಾರುಖ್​ ಖಾನ್​, ‘ಊಹಿಸುವ ಕೆಲಸ ನನ್ನದಲ್ಲ. ನಿಮ್ಮನ್ನು ರಂಜಿಸುವುದು ಮತ್ತು ನಗಿಸುವುದು ಮಾತ್ರ ನನ್ನ ಕೆಲಸ’ ಎಂದು ಹೇಳಿದ್ದಾರೆ.

I am not in the business of predictions…I am in the business of entertaining you and to make u smile… https://t.co/sYpMggvtZq

— Shah Rukh Khan (@iamsrk) December 17, 2022

2023ರ ಜನವರಿ 25ರಂದು ‘ಪಠಾಣ್​’ ಚಿತ್ರ ರಿಲೀಸ್​ ಆಗಲಿದೆ. ಈ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ. ಪ್ರತಿಷ್ಠಿತ ‘ಯಶ್​ ರಾಜ್​ ಫಿಲ್ಮ್ಸ್​’ ಬ್ಯಾನರ್​ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಾಹಂ ಕೂಡ ನಟಿಸಿದ್ದು, ಸ್ಟಾರ್​ ಮೆರುಗು ಹೆಚ್ಚಿದೆ. ಅದ್ದೂರಿ ಬಜೆಟ್​ನಲ್ಲಿ ತಯಾರಾದ ಈ ಸಿನಿಮಾವನ್ನು ವಿವಿಧ ದೇಶಗಳಲ್ಲಿ ಚಿತ್ರಿಸಲಾಗಿದೆ.

ಇದನ್ನೂ ಓದಿ: Prakash Raj: ‘ಬೇಷರಂ ರಂಗ್​’ ವಿವಾದ; ‘ಇದನ್ನೆಲ್ಲ ಎಲ್ಲಿಯವರೆಗೆ ಸಹಿಸಬೇಕು’ ಅಂತ ಪ್ರಶ್ನೆ ಮಾಡಿದ ಪ್ರಕಾಶ್​ ರಾಜ್​

ಇತ್ತೀಚೆಗೆ ಈ ಸಿನಿಮಾದ ‘ಬೇಷರಂ ರಂಗ್​..’ ಹಾಡು ಬಿಡುಗಡೆ ಆಯಿತು. ಇದರಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕಿನಿ ಧರಿಸಿದ್ದಾರೆ ಎಂಬ ಕಾರಣಕ್ಕೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದೆ. ಅದನ್ನೇ ನೆಪವಾಗಿಟ್ಟುಕೊಂಡು ಈ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂಬ ಅಭಿಯಾನ ಕೂಡ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ Boycott Pathaan ಹ್ಯಾಷ್ ಟ್ಯಾಗ್​ ಟ್ರೆಂಡ್​ ಆಗುತ್ತಿದೆ.

ಇದನ್ನೂ ಓದಿ: Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ

ಕೊಂಕು ನುಡಿದವರಿಗೆ ಶಾರುಖ್​ ಖಾನ್​ ತಿರುಗೇಟು:

ಡಿ.15ರಂದು ಕೊಲ್ಕತ್ತಾ ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆಗೊಂಡಿತು. ಈ ವೇದಿಕೆಯಲ್ಲಿ ಶಾರುಖ್​ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ. ‘ಜಗತ್ತು ಸಹಜ ಸ್ಥಿತಿಗೆ ಬಂದಿದೆ. ನಾವೆಲ್ಲರೂ ಖುಷಿಯಾಗಿದ್ದೇವೆ. ನಾನು ಹೆಚ್ಚು ಖುಷಿಯಾಗಿದ್ದೇನೆ. ಜಗತ್ತು ಏನು ಬೇಕಾದರೂ ಮಾಡಿಕೊಳ್ಳಲಿ. ನಾನು, ನೀವು ಮತ್ತು ಪಾಸಿಟಿವ್​ ಮನಸ್ಥಿತಿ ಇರುವ ಎಲ್ಲ ಜನರು ಜೀವಂತವಾಗಿದ್ದೇವೆ ಅಂತ ಹೇಳಲು ನನಗೆ ಯಾವುದೇ ಅಡೆತಡೆ ಇಲ್ಲ’ ಎಂದು ಶಾರುಖ್​ ಖಾನ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

LEAVE A REPLY

Please enter your comment!
Please enter your name here