Home Uncategorized Shivakumar; ರಸ್ತೆಯಲ್ಲಿ ಸಿಲಿಕಾನ್ ಸಿಟಿ ಮಂದಿ ಸಮಯ ವ್ಯರ್ಥವಾಗಲು ನಾವು ಬಿಡಲ್ಲ – DCM ಡಿಕೆಶಿ

Shivakumar; ರಸ್ತೆಯಲ್ಲಿ ಸಿಲಿಕಾನ್ ಸಿಟಿ ಮಂದಿ ಸಮಯ ವ್ಯರ್ಥವಾಗಲು ನಾವು ಬಿಡಲ್ಲ – DCM ಡಿಕೆಶಿ

23
0

ಬೆಂಗಳೂರು;- ನಗರದ ಜನರ ಸಮಯ ರಸ್ತೆಗಳಲ್ಲಿ ವ್ಯರ್ಥವಾಗಲು ನಮ್ಮ ಸ‌ರ್ಕಾರ ಬಿಡಲ್ಲ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಬೆಂಗಳೂರಿನ ಜನರ ಸಮಯ ರಸ್ತೆಗಳಲ್ಲಿ ವ್ಯರ್ಥವಾಗಲು ನಮ್ಮ ಸ‌ರ್ಕಾರ ಬಿಡಲ್ಲ. ಇನ್ನೂ 100 ದಿನಗಳಲ್ಲಿ ಸಮಸ್ಯೆಗೆ ಪರಿಹಾರ ರೂಪಿಸಲಾಗುತ್ತದೆ ಎಂದು DCM ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಸೆಪ್ಟೆಂಬರ್ 27 ರಂದು 17 ಕಿಮೀ ವ್ಯಾಪ್ತಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಟ್ರಾಫಿಕ್ ಅಡಚಣೆ ಉಂಟಾಗಿತ್ತು, ಸಹಜ ಸ್ಥಿತಿಗೆ ಮರಳಲು ಸುಮಾರು ಐದು ಗಂಟೆ ಸಮಯ ತೆಗೆದುಕೊಂಡಿತ್ತು. ನಮ್ಮ ಸರ್ಕಾರವು ಜನರ ಸಮಯವನ್ನು ರಸ್ತೆಗಳಲ್ಲಿ ವ್ಯರ್ಥ ಮಾಡಲು ಬಿಡುವುದಿಲ್ಲ. ನಗರದ ಆದಾಯದ ಐದನೇ ಒಂದು ಭಾಗವು ಹೊರ ವರ್ತುಲ ರಸ್ತೆಯ ಕೈಗಾರಿಕೆಗಳಿಂದ ಬರುತ್ತದೆ ಮತ್ತು ಅವುಗಳ ಪ್ರಾಮುಖ್ಯತೆಯ ಬಗ್ಗೆ ನಮಗೆ ತಿಳಿದಿದೆ. ನಿಮಗೆ, ನಿಮ್ಮ ನೌಕರರಿಗೆ ಮತ್ತಿ ಅಲ್ಲಿನ ನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

The post Shivakumar; ರಸ್ತೆಯಲ್ಲಿ ಸಿಲಿಕಾನ್ ಸಿಟಿ ಮಂದಿ ಸಮಯ ವ್ಯರ್ಥವಾಗಲು ನಾವು ಬಿಡಲ್ಲ – DCM ಡಿಕೆಶಿ appeared first on Ain Live News.

LEAVE A REPLY

Please enter your comment!
Please enter your name here