ಶಿವಮೊಗ್ಗ: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆಧಾರದ ಮೇಲೆ ಒರ್ವ ಇನ್ಸ್ಪೆಕ್ಟರ್ ಹಾಗೂ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇಲ್ಲಿವರೆಗೂ ರಾಗಿಗುಡ್ಡದ ಪ್ರಕರಣದಲ್ಲಿ ನಡೆದಿದ್ದೇನು ಎಂಬುದು ಗೊತ್ತಾಗಿಲ್ಲ! ಕಾರಣ ಹೇಳಲು ಆಗದ ಇಲಾಖೆ ಇದೀಗ ಪೊಲೀಸ್ ಇಲಾಖೆಯಲ್ಲಿ ಉತ್ತಮ ತನಿಖಾಧಿಕಾರಿ ಎನಿಸಿಕೊಂಡಿರುವ ಅಭಯ್ ಪ್ರಕಾಶ್ ಸೋಮನಾಳ್ರನ್ನ ಸಸ್ಪೆಂಡ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
CP Yogeshwar; ಕಾಂಗ್ರೆಸ್ ಇಂದು ಬಹುಮತದಿಂದ ಅಧಿಕಾರಕ್ಕೆ ಬರಲು ನಮ್ಮ ಜಗಳ ಕಾರಣ – ಸಿ.ಪಿ.ಯೋಗೇಶ್ವರ್
ಈ ಹಿಂದಿನ ಹಲವು ಗಲಾಟೆಗಳ ಪ್ರಕರಣದಲ್ಲಿ ನಡೆದ ತಲೆದಂಡಗಳು ಅಷ್ಟೆಕಷ್ಟೆ. ರಾಗಿಗುಡ್ಡದ ಪ್ರಕರಣದಲ್ಲಿ ಅಭಯ್ ಪ್ರಕಾಶ್ರವರ ತಲೆದಂಡ ನಡೆಯುತ್ತಿರುವುದರ ಹಿಂದೆ ಅನುಮಾನಗಳು ಹುಟ್ಟಿಕೊಳ್ಳುತ್ತಿದೆ. ಈ ಬಗ್ಗೆ ಚರ್ಚೆಯು ಆರಂಭವಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಮತ್ತು ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ದಾವಣಗೆರೆ ಪೂರ್ವವಲಯ ಐಜಿಪಿ ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ.ಆದೇಶದ ಬಗ್ಗೆಯೇ ರೆಕ್ಕೆಪುಕ್ಕಗಳು ಕಟ್ಟಿಕೊಳ್ಳುತ್ತಿದೆ..
The post Shivamoga: ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ: ಮೂವರು ಸಿಬ್ಬಂದಿ ಅಮಾನತು appeared first on Ain Live News.