ನಟ ಶಿವರಾಜ್ ಕುಮಾರ್ (Shivarajkumar) ‘ವೇದ’ ಸಿನಿಮಾ ತಂಡದೊಂದಿಗೆ ಇಂದು (ಡಿ.3) ಮಂತ್ರಾಲಯ ರಾಯರ ಬೃಂದಾವನ ದರ್ಶನ ಪಡೆದುಕೊಂಡರು. ಪತ್ನಿ ಗೀತಾ, ಇಬ್ಬರು ಮಕ್ಕಳು ಮತ್ತು ದಿರೇನ್ ರಾಮ್ ಕುಮಾರ್ ಕೂಡ ಭಾಗಿಯಾಗಿದ್ದರು. ಮಂತ್ರಾಲಯದಲ್ಲಿ ಉಪಹಾರ ಸೇವಿಸಿ ಹೊರ ಬಂದ ಶಿವಣ್ಣನನ್ನು ನೋಡಲು ಮಹಿಳಾ ಫ್ಯಾನ್ಸ್ ಮುಗಿಬಿದ್ದರು. ಇದೇ ವೇಳೆ ಸೆಲ್ಫಿ ತೆಗೆಯುವ ನೆಪದಲ್ಲಿ ಆಂಟಿ ಒಬ್ಬರು ಪತ್ನಿ ಗೀತಾ ಎದುರೇ ಶಿವಣ್ಣನಿಗೆ ಕಿಸ್ ಕೊಟ್ಟಿದ್ದಾರೆ. ಇದನ್ನು ನೋಡಿದ ಗೀತಕ್ಕ ಮುಗುಳುನಗೆ ಬೀರಿದರು. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
