Home Uncategorized Siddaramaiah House: ಸಿಎಂ ಸಿದ್ದರಾಮಯ್ಯ ಮನೆಗೆ ಕಲ್ಲೆಸೆದ ವ್ಯಕ್ತಿ ಅರೆಸ್ಟ್..!

Siddaramaiah House: ಸಿಎಂ ಸಿದ್ದರಾಮಯ್ಯ ಮನೆಗೆ ಕಲ್ಲೆಸೆದ ವ್ಯಕ್ತಿ ಅರೆಸ್ಟ್..!

26
0

ಮೈಸೂರು: ಇಲ್ಲಿನ ಟಿ.ಕೆ. ಬಡಾವಣೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನಿವಾಸಕ್ಕೆ ವ್ಯಕ್ತಿಯೊಬ್ಬ ಕಲ್ಲೆಸೆದಿರುವ ಘಟನೆ ನಡೆದಿದೆ. ಕಲ್ಲೆಸೆದ ವ್ಯಕ್ತಿಯನ್ನು ಕೂಡಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನ (Mysuru) ಸತ್ಯಮೂರ್ತಿ ಎಂಬಾತ ಕಲ್ಲೆಸೆದ ವ್ಯಕ್ತಿ. ಮಂಗಳವಾರ ಬೆಳಗ್ಗೆ ಈತ ಸಿಎಂ ಮನೆಗೆ ಕಲ್ಲೆಸೆದಿದ್ದ. ಘಟನೆ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಸತ್ಯಮೂರ್ತಿ ನಿನ್ನೆಯಷ್ಟೇ ಸಿಎಂ ಮನೆಗೆ ಬಂದಿದ್ದ. ಭಾನುವಾರ ಸಿಎಂ ಮೈಸೂರಿನ ಮನೆಯಲ್ಲಿದ್ದ ವೇಳೆ ಸಿಎಂ ಭೇಟಿಗೆ ಬಂದಿದ್ದ. ಸಿಎಂ ಭೇಟಿಗೆ ಬಂದಿದ್ದನ್ನ ತಾನೇ ಸೆಲ್ಫಿ ವೀಡಿಯೋ ಸಹ ಮಾಡಿದ್ದ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಯಂತ್ರ ಒಡೆದು ಹಾಕಿದ್ದು ಇದೇ ಸತ್ಯಮೂರ್ತಿ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಫೋಟೋಗೆ ರೌಡಿ ರಾಜೇಂದ್ರ ಎಂದು ಪೋಸ್ಟ್ ಕೂಡ ಮಾಡಿದ್ದ.

Iphone 15 Bigg Update: ಐಫೋನ್ 15 ಸೀರೀಸ್ ಬಳಕೆದಾರರಿಗೆ ಬಿಗ್‌ ಅಪೆ ಡೇಟ್:‌ ಏನಂತೀರಾ?!

ಈತ ಮಾನಸಿಕ ಅಸ್ವಸ್ಥ ಎಂದು ಈ ಹಿಂದೆ ಹೇಳಲಾಗಿತ್ತು. ಘಟನೆ ಸಂಬಂಧ ಪೊಲೀಸರಿಂದ ತೀವ್ರ ವಿಚಾರಣೆ ನಡೆಯುತ್ತಿದೆ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಇವಿಎಂ ಯಂತ್ರ ಒಡೆದ ದೃಶ್ಯ ಬಳಸಿ ಜೈಲರ್ ಸಿನಿಮಾ ಹಾಡನ್ನ ಮಿಕ್ಸ್ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ ಕೊಟ್ಟಿದ್ದ. ತನ್ನ ಅವಾಂತರಗಳಿಗೆ ತಾನೇ ಬಿಲ್ಡಪ್ ಕೊಟ್ಟುಕೊಳ್ಳುತ್ತಿದ್ದ ಆರೋಪಿ ಸತ್ಯಮೂರ್ತಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ, ವಶಕ್ಕೆ ಪಡೆದಿದ್ದಾರೆ.

The post Siddaramaiah House: ಸಿಎಂ ಸಿದ್ದರಾಮಯ್ಯ ಮನೆಗೆ ಕಲ್ಲೆಸೆದ ವ್ಯಕ್ತಿ ಅರೆಸ್ಟ್..! appeared first on Ain Live News.

LEAVE A REPLY

Please enter your comment!
Please enter your name here