ಬೆಂಗಳೂರು:
ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಖಂಡಿಸಿದ್ದಾರೆ. ಚಕ್ರವರ್ತಿ ಸೂಲೆಬೆಲೆ, ವೀರ ಸಾವರ್ಕರ್ ಪಠ್ಯವನ್ನು ತೆಗೆಯುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಶ್, ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಮತಗಳು ಬೇಕಾಗಿದ್ದು, ಸಿದ್ದರಾಮಯ್ಯ ಅವರದ್ದು ಹಿಂದೂ ವಿರೋಧಿ ಸರ್ಕಾರವಾಗಿದೆ. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಎಲ್ಲವನ್ನೂ ರಾಜಕೀಯಗೊಳಿಸಲು ಬಯಸಿದ್ದು, ಮತ್ತೆ ಹಿಜಾಬ್ ಜಾರಿಗೊಳಿಸಬಹುದು ಎಂದರು.
#WATCH | "They (Congress) want votes of Muslims, Siddramaiah's govt is against Hindus…they might even re-introduce hijab…they want to attract votes of minorities and politicise everything…": BC Nagesh, Former Karnataka Education Minister https://t.co/8NimglOzH0 pic.twitter.com/plbgrqh1id
— ANI (@ANI) June 15, 2023
ಇದಕ್ಕೂ ಮುನ್ನಾ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪಠ್ಯಕ್ರಮದಲ್ಲಿ ಕೆ.ಬಿ.ಹೆಡಗೇವಾರ್ ಅವರ ಪಠ್ಯವನ್ನು ಕೈಬಿಡಲಾಗಿದೆ. ಹಿಂದಿನ ಸರ್ಕಾರ ಕಳೆದ ವರ್ಷ ಏನೆಲ್ಲಾ ಬದಲಾವಣೆಗಳನ್ನು ಮಾಡಿದ್ದರೂ, ಅದನ್ನು ನಾವು ಬದಲಾಯಿಸುತ್ತಿದ್ದೇವೆ ಎಂದು ತಿಳಿಸಿದ