ಬೆಂಗಳೂರು: ಸಿಎಂ ಸಿದ್ದರಾಮಯ್ಯ 3 ಗಂಟೆ 14 ನಿಮಿಷ ಸುದೀರ್ಘ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಗಾತ್ರ ಒಟ್ಟು 3,71,383 ಕೋಟಿ ರೂಪಾಯಿ ಆಗಿದೆ. ಬಜೆಟ್ ಭಾಷಣ ಮುಕ್ತಾಯವಾದ ಕಾರಣ ವಿಧಾನಸಭೆ ಕಲಾಪವನ್ನು ಸೋಮವಾರ ಬೆಳಗ್ಗೆ 10.15ಕ್ಕೆ ಕಲಾಪ ಆರಂಭವಾಗಲಿದೆ.
ಕಳೆದ ಬಾರಿ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ಇತ್ತು. ಈ ಬಾರಿ 3.50 ಲಕ್ಷ ಕೋಟಿ ಅಥವಾ 3.80 ಲಕ್ಷ ಕೋಟಿ ತಲುಪುವ ಸಾಧ್ಯತೆ ಇದೆ. ಕಳೆದ ಬಜೆಟ್ನಲ್ಲಿ 85,815 ಕೋಟಿ ರೂ. ಸಾಲದ ಮೊರೆ ಹೋಗಿತ್ತು ಸರ್ಕಾರ. ಈ ಬಾರಿ ಅಂದಾಜು 1 ಲಕ್ಷ ಕೋಟಿಗೆ ಸಾಲ ಹೆಚ್ಚಾಗುವ ಸಾಧ್ಯತೆ ಇದೆ.