ಮೈಸೂರು:
ವರುಣಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯ ಅವರು ಮತ ಚಲಾಯಿಸಿದ್ದು, ಈ ವೇಳೆ ಚುನಾವಣಾ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಮತದಾನ ಮಾಡಿದ್ದು, ಈ ವೇಳೆ ಶಿಷ್ಟಾಚಾರದಂತೆ ಎಡಗೈ ತೋರುಬೆರಳಿಗೆ ಹಾಕಬೇಕಾದ ಅಳಿಸಲಾಗದ ಶಾಯಿಯನ್ನು ಅವರ ಬಲಗೈ ಬೆರಳಿಗೆ ಶಾಯಿ ಹಾಕುವ ಮೂಲಕ ಚುನಾವಣೆ ಸಿಬ್ಬಂದಿ ಎಡವಟ್ಟು ಮಾಡಿದರು.
ಆದರೆ ಸಿದ್ದರಾಮಯ್ಯ ಜೊತೆಯಲ್ಲಿ ಬಂದಿದ್ದ ಅವರ ಪುತ್ರ ಡಾ. ಯತೀಂದ್ರ ಮತ್ತು ಸೊಸೆ ಸ್ಮಿತ ರಾಕೇಶ್ ಅವರಿಗೆ ಶಿಷ್ಟಾಚಾರದಂತೆ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಗಿದೆ. ಆದರೆ ಸಿದ್ದರಾಮಯ್ಯ ವಿಚಾರದಲ್ಲಿ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ.
#WATCH | Former Karnataka CM and Congress candidate from Varuna constituency, Siddaramaiah casts his vote for #KarnatakaElection pic.twitter.com/SPjUIzCOcF
— ANI (@ANI) May 10, 2023
ಮೈಸೂರು ನಗರದಿಂದ ಬೆಳಿಗ್ಗೆ 10 ಗಂಟೆಗೆ ಸಿದ್ದರಾಮನಹುಂಡಿಗೆ ಆಗಮಿಸಿದ್ದ ಸಿದ್ದರಾಮಯ್ಯ ತಮ್ಮ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ, ಸೊಸೆ ಸ್ಮಿತಾ ರಾಕೇಶ್ ಜತೆಗೂಡಿ ಮತದಾನ ಮಾಡಿದರು. ಇದಕ್ಕೂ ಮೊದಲು ಗುರುತಿನ ಚೀಟಿ ಪರಿಶೀಲಿಸಿ, ಶಾಯಿ ಹಾಕುವಾಗ ಸಿಬ್ಬಂದಿ ಯಡವಟ್ಟು ಮಾಡಿದರು. ಡಾ. ಯತೀಂದ್ರ ಮತ್ತು ಸ್ಮಿತ ರಾಕೇಶ್ ಅವರಿಗೆ ಶಿಷ್ಟಾಚಾರದಂತೆ ಎಡಗೈ ಬೆರಳಿಗೆ ಶಾಯಿ ಹಾಕಿದರೂ, ಸಿದ್ದರಾಮಯ್ಯ ವಿಚಾರದಲ್ಲಿ ಯಡವಟ್ಟು ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಶಿಷ್ಠಾಚಾರದಂತೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಬೇಕು.. ಒಂದು ವೇಳೆ ಬೇರಾವುದೇ ಚುನಾವಣೆಗಳಿಂದ ಮತದಾರ ಮತದಾನ ಮಾಡಿದಾಗ ಶಾಯಿ ಹಾಕಿದ್ದರೆ ಆಗ ಮಾತ್ರ ಬೇರೆ ಬೆರಳಿಗೆ ಶಾಯಿ ಹಾಕಲಾಗುತ್ತದೆ.