Home ಚಿತ್ರದುರ್ಗ ಮುರುಘಾ ಮಠದಲ್ಲಿ ಮುರುಘಾಶ್ರೀಗಳ 20 ಲಕ್ಷ ಮೌಲ್ಯದ ಬೆಳ್ಳಿ ಪ್ರತಿಮೆ ಕಳ್ಳತನ

ಮುರುಘಾ ಮಠದಲ್ಲಿ ಮುರುಘಾಶ್ರೀಗಳ 20 ಲಕ್ಷ ಮೌಲ್ಯದ ಬೆಳ್ಳಿ ಪ್ರತಿಮೆ ಕಳ್ಳತನ

20
0

ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಮಠದಲ್ಲಿ ಕಳ್ಳರ ಕೈಚಳಕ ತೋರಿದ್ದು, ಮುರುಘಾಶ್ರೀ ಬೆಳ್ಳಿ‌ ಪ್ರತಿಮೆ ಕಳ್ಳತನವಾಗಿದೆ.

ಸುಮಾರು 20 ಲಕ್ಷ ಮೌಲ್ಯದ ಬೆಳ್ಳಿ ಪ್ರತಿಮೆಯು 2021 ರಲ್ಲಿ ಮುರುಘಾಶ್ರೀಗೆ ಅವರ ಭಕ್ತರು ಉಡುಗೊರೆಯಾಗಿ ನೀಡಿದ್ದರು. ಪೋಕ್ಸೋ ಕೇಸಲ್ಲಿ ಮುರುಘಾಶ್ರೀ ನ್ಯಾಯಾಂಗ ಬಂಧನದಲ್ಲಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಅವರನ್ನು ಆಡಳಿತಾಧಿಕಾರಿಯಾಗಿ ಸರ್ಕಾರ‌ ನೇಮಿಸಿದೆ

ಇದರ ಬೆನ್ನಲ್ಲೇ ಕಳೆದ ಜೂನ್ 26 ರಂದು ಮುರುಘಾ ಮಠದಲ್ಲಿನ ಸಭಾಂಗಣದಲ್ಲಿದ್ದ ಮುರುಘಾಶ್ರೀ ಬೆಳ್ಳಿ ಪ್ರತಿಮೆ ಕಳ್ಳತನವಾಗಿದೆ. ಆದರೆ ಈ ಪ್ರದೇಶಕ್ಕೆ ಯಾರಿಗೂ ಪ್ರವೇಶ ಇಲ್ಲದ ಹಿನ್ನೆಲೆಯಲ್ಲಿ ಯಾರು ಸಹ ಈ ಪ್ರತಿಮೆಯತ್ತ ಗಮನಿಸಿರಲಿಲ್ಲ‌. ಹೀಗಾಗಿ ಪ್ರಕರಣ ತಡವಾಗಿ ಮಠದ ಆಡಳಿತ ಸಮಿತಿ ಗಮನಕ್ಕೆ ಬಂದಿದೆ. ಈ ಕೃತ್ಯದಿಂದಾಗಿ ಇದ್ದ ಮೂವರಲ್ಲಿ ಕದ್ದವರು ಯಾರೆಂಬ ಪ್ರಶ್ನೆ ಮಠದ ಭಕ್ತರಲ್ಲಿ ಮೂಡಿದೆ.

ಕಳ್ಳತನದ ಬಗ್ಗೆ ಹಲವು ಅನುಮಾನ ಮೂಡಿದ್ದು, ಮಠದ ಆಡಳಿತ ಸಮಿತಿ ಸದಸ್ಯರಾದ ಬಸವಕುಮಾರ ಶ್ರೀಗಳಿಗೆ ಉಸ್ತುವಾರಿ ಶ್ರೀಗಳಾಗಿದ್ದ ಬಸವಪ್ರಭು ಶ್ರೀಗಳು ಮಾಹಿತಿ ನೀಡಿದ‌ ಹಿನ್ನೆಲೆಯಲ್ಲಿ ಮಠದ ಭಕ್ತರು ಹಾಗೂ ಮುಖಂಡರೊಂದಿಗೆ ಆಂತರಿಕ ಚರ್ಚೆ ನಡೆಸಿದರು.

LEAVE A REPLY

Please enter your comment!
Please enter your name here