ಬೆಂಗಳೂರು:
ಯಲಹಂಕ ಶಾಸಕ ವಿಶ್ವನಾಥ್ ಅವರ ಹತ್ಯೆಗೆ ಯೋಜನೆ ರೂಪಿಸಲಾಗಿತ್ತು ಅನ್ನೋ ಸುದ್ದಿ ಹೊರಬಿದ್ದಿದೆ. ಈ ಕುರಿತಾದ ವಿಡಿಯೋವೊಂದು ಹೊರಬಂದಿದ್ದು, ಈ ಬಗ್ಗೆ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
Plot to assassinate a sitting BJP MLA & chairman of BDA SR vishwanath being probed by crime branch. Congress leader Gopalkrishna has been detained and is being questioned.
— Deepak Bopanna (@dpkBopanna) December 1, 2021
A video is now out where he talks of his plan to kill the MLA and make it a swift & secret op. pic.twitter.com/c42OZi3Ot3
ಯಲಹಂಕ ಶಾಸಕ ವಿಶ್ವಾನಾಥ್ ಕೊಲೆ ಮಾಡುವ ಬಗ್ಗೆ ಕಾಂಗ್ರೆಸ್ ಮುಖಂಡ ಎಂ ಎನ್ ಗೋಪಾಲಕೃಷ್ಣ ಮಾತುಕತೆ ನಡೆಸಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಚರ್ಚೆ ಮಾಡಿರುವ ವಿಡಿಯೋ ಸಿಸಿಬಿ ತಂಡಕ್ಕೆ ಸಿಕ್ಕಿದೆ. ಈ ವಿಡಿಯೋ ಆಧಾರದ ಮೇಲೆ ತಡರಾತ್ರಿವರೆಗೂ ಸಿಸಿಬಿಯಿಂದ ಗೋಪಾಲಕೃಷ್ಣ ಅವರನ್ನು ವಿಚಾರಣೆ ಮಾಡಲಾಗಿದೆ. ಈ ತನಿಖೆ ವೇಳೆ, ಹೊಸ ವಿಷಯವೊಂದು ಹೊರ ಬಂದಿದ್ದು, ಅದರಲ್ಲಿ ಗೋಪಾಲಕೃಷ್ಣ ಅವರನ್ನು ಬಿಟ್ಟು ವಿಡಿಯೋ ಮಾಡಿರುವ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ರಿಕಾರ್ಡ್ ಮಾಡಿದ್ದ ಯಲಹಂಕದ ವಿಶ್ವನಾಥ್ ಬೆಂಬಲಿಗ ದೇವರಾಜ್ ಅಲಿಯಾಸ್ ಕುಳ್ಳದೇವರಾಜ್ ಎಂಬಾತನನ್ನು ಸಿಸಿಬಿ ವಶಕ್ಕೆ ಪಡೆದಿದೆ.
ವಿಶ್ವನಾಥ್ ಅವರಿಗೆ ಹತ್ತಿರವಾಗಲೂ ಗೋಪಾಲಕೃಷ್ಣ ಬಳಿ ಹೋಗಿ ವಿಶ್ವನಾಥ್ ಮುಗಿಸುವ ಪ್ಲಾನ್ ಕೊಟ್ಟು ಮಾತುಕತೆ ನಡೆಸಿದ್ರಾ ಅನ್ನೋ ಆರೋಪ ಈಗ ಕುಳ್ಳ ದೇವರಾಜ್ ಮೇಲೆ ಬಂದಿದೆ. ಈ ಕುರಿತು ಕುಳ್ಳ ದೇವರಾಜ್ ನನ್ನು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ ಸಿಸಿಬಿ ಅಧಿಕಾರಿಗಳು, ಗೋಪಾಲಕೃಷ್ಣರನ್ನು ಪ್ರಚೋದಿಸಿ ವಿಡಿಯೋ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇದೇ ಕಾರಣಕ್ಕಾಗಿ ಕುಳ್ಳ ದೇವರಾಜ್ ನನ್ನು ವಶಕ್ಕೆ ಪಡೆದುಕೊಂಡ ಸಿಸಿಬಿ ತಂಡ ಗೋಪಾಲಕೃಷ್ಣ ರನ್ನ ಬಿಟ್ಟು ಮನೆಗೆ ಕಳುಹಿಸಿದೆ.
Also Read: Video on alleged plot to kill Karnataka BJP MLA Vishwanath surfaces probe on
ಇದನ್ನೂ ಓದಿ: ಯಲಹಂಕ ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ ; ಕೊಲೆ ಕುರಿತ ವಿಡಿಯೋ ಬಗ್ಗೆ ಸಿಸಿಬಿ ತನಿಖೆ