Home Uncategorized SSC GD Constable Vacancy 2022: 45,284 ಉದ್ಯೋಗಾವಕಾಶ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

SSC GD Constable Vacancy 2022: 45,284 ಉದ್ಯೋಗಾವಕಾಶ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

29
0

SSC GD Constable Vacancy 2022: ಸ್ಟಾಫ್ ಸೆಲೆಕ್ಷನ್ ಕಮಿಷನ್​ನ ಕಾನ್ಸ್‌ಟೇಬಲ್ ಜಿಡಿ 2022 ರ ಪರಿಷ್ಕೃತ ಖಾಲಿ ಹುದ್ದೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ 20,000 ಕ್ಕೂ ಹೆಚ್ಚು ಹೊಸ ಹುದ್ದೆಗಳನ್ನು ನೇಮಕಾತಿಗೆ ಸೇರಿಸಲಾಗಿದೆ. ಎಸ್‌ಎಸ್‌ಸಿ ಬಿಡುಗಡೆ ಮಾಡಿರುವ ಹೊಸ ಹುದ್ದೆಯ ಪಟ್ಟಿಯ ಪ್ರಕಾರ ಒಟ್ಟು 45,284 ಹುದ್ದೆಗಳನ್ನು ಈ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.

ಈ 45284 ಹುದ್ದೆಗಳಲ್ಲಿ 40,274 ಹುದ್ದೆಗಳು ಪುರುಷ ಅಭ್ಯರ್ಥಿಗಳಿಗೆ, 4835 ಹುದ್ದೆಗಳು ಮಹಿಳೆಯರಿಗೆ ಮತ್ತು 175 ಹುದ್ದೆಗಳು ಎನ್‌ಸಿಬಿಗೆ ಅಭ್ಯರ್ಥಿಗಳಿಗೆ ಮೀಸರಿಸಲಾಗಿದೆ.

ಹುದ್ದೆಗಳ ವಿವರಗಳು:

ಬಿಎಸ್‌ಎಫ್‌- 20,756 ಹುದ್ದೆಗಳು
ಸಿಐಎಸ್‌ಎಫ್‌- 5914 ಹುದ್ದೆಗಳು
ಸಿಆರ್‌ಪಿಎಫ್‌- 11,169 ಹುದ್ದೆಗಳು
ಎಸ್‌ಎಸ್‌ಬಿ- 2167 ಹುದ್ದೆಗಳು
ಐಟಿಬಿಪಿ- 1787 ಹುದ್ದೆಗಳು
ಅಸ್ಸಾಂ ರೈಫಲ್ಸ್‌- 3153 ಹುದ್ದೆಗಳು
ಎಸ್‌ಎಸ್‌ಎಫ್‌- 154 ಹುದ್ದೆಗಳು.

ಅರ್ಜಿ ಪ್ರಕ್ರಿಯೆ:
ಈ ಹಿಂದೆ 24,369 ಹುದ್ದೆಗಳನ್ನು ಎಸ್‌ಎಸ್‌ಸಿ ಜಿಡಿ ಕಾನ್ಸ್‌ಟೇಬಲ್ ನೇಮಕಾತಿ ಮೂಲಕ ಭರ್ತಿ ಮಾಡಬೇಕಿತ್ತು. ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಹಾಗೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 30 ನವೆಂಬರ್ 2022.

ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18-23 ವರ್ಷಗಳ ನಡುವೆ ಇರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್​ನ ಅಧಿಕೃತ ವೆಬ್​ಸೈಟ್​ ssc.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

 

 

LEAVE A REPLY

Please enter your comment!
Please enter your name here