Home ಬೆಂಗಳೂರು ನಗರ SSLC-PUC ನಕಲಿ ಅಂಕಪಟ್ಟಿ ಜಾಲ ಪತ್ತೆ, ಮೂವರ ಬಂಧನ

SSLC-PUC ನಕಲಿ ಅಂಕಪಟ್ಟಿ ಜಾಲ ಪತ್ತೆ, ಮೂವರ ಬಂಧನ

28
0
SSLC-PUC fake marksheet network busted, three arrested
SSLC-PUC fake marksheet network busted, three arrested

ಬೆಂಗಳೂರು:

ಬೆಂಗಳೂರಿನಲ್ಲಿ SSLC-PUC ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ ಪೊಲೀಸರು ಬೇದಿಸಿದ್ದು, ಮೂರು ಮಂದಿಯನ್ನು ಬಂಧಿಸಿದ್ದಾರೆ.

ಸರ್ಕಾರದಿಂದ ಯಾವುದೇ ಮಾನ್ಯತೆ ಪಡೆಯದೆ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್(ಕೆಐಒಎಸ್)ಎಂಬ ಸಂಸ್ಥೆ ತೆರೆದು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ಅಂಕಪಟ್ಟಿಗಳನ್ನು ವಿತರಣೆ ಮಾಡುತ್ತಿದ್ದ ಜಾಲವೊಂದನ್ನು ಸಿಸಿಬಿ ಪೋಲಿಸರು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ ವೈಟಿಟಿ ಶಾಲೆಯ ಸಂಸ್ಥಾಪಕರಾದ ಮೈಲಾರಿ ಎಂಬುವವರು ನಕಲಿ ಅಂಕಪಟ್ಟಿಗಳನ್ನು ನೀಡಿ ಮೋಸ ಮಾಡುತ್ತಿದ್ದಾರೆ ಎಂದು ಸಚಿನ್ ಎಂಬುವವರು ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ತನಿಖೆ ಕೈಗೊಂಡು ಅಂಕಪಟ್ಟಿ ಜಾಲದ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಅಂಕ ಪಟ್ಟಿಗಳನ್ನು ವಿತರಣೆ ಮಾಡುತ್ತಿದ್ದ ನಗರದ ವೈಟಿಟಿ ಇನ್‍ಸ್ಟಿಟ್ಯೂಟ್ ಸಂಸ್ಥಾಪಕ, ಇಗ್ನೈಟ್ ಗ್ರೂಪ್ ಆಪ್ ಇನ್‍ಸ್ಟಿಟ್ಯೂಟ್‍ನ ಸಂಸ್ಥಾಪಕ ಹಾಗೂ ಕೆಐಒಎಸ್ ಸಂಸ್ಥೆಯ ಮೂವರನ್ನು ಬಂಧಿಸಿದ್ದಾರೆ.

ಹುಬ್ಬಳ್ಳಿ ವಿದ್ಯಾನಗರದ ಪ್ರಭುರಾಜ ಹೊಸಪೇಟೆ (36), ಬೆಂಗಳೂರಿನ ಕನಕಪುರ ರಸ್ತೆ ಜರಗನಹಳ್ಳಿ ಎಂ.ಎಸ್ ಲೇಜೌಟ್‍ನ ಮೈಲಾರಿ ಅಲಿಯಾಸ್ ಮೈಲಾರಿ ಪಾಟೀಲ್ (46), ಮತ್ತು ಅರಕೆರೆಯ ಡಾಕ್ಟರ್ಸ್ ಲೇಜೌಟ್ ನಿವಾಸಿ ಮೊಹಮದ್ ತೈಹಿದ್ ಅಹಮದ್ (30) ಎಂಬುವವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಗಳಿಂದ 10 ಮತ್ತು ಹನ್ನೇರಡನೇ ತರಗತಿಗೆ ಸಮಾನವಾದ ಎಂದು ನಮೋದಿಸಿದ್ದ ವಿದ್ಯಾರ್ಥಿ ನೊಂದಣಿ ಸಂಖ್ಯೆ, ವಿದ್ಯಾರ್ಥಿ ಹೆಸರು ಮತ್ತು ಇತರ ಮಾಹಿತಿಗಳು ವಿವಿಧ ವಿಷಯಗಳ ಅಂಕ ನಮೋದಿಸಿರುವ 70 ಅಂಕ ಪಟ್ಟಿಗಳು ನೊಂದಣಿ ಸಂಖ್ಯೆ ವಿದ್ಯಾರ್ಥಿ ಹೆಸರನ್ನು ನಮೋದಿಸಿ ಅಂಕ ನಮೋದಿಸಿದ 190 ಅಂಕ ಪಟ್ಟಿಗಳು, ಖಾಲಿ ಇರುವ 7100 ಅಂಕ ಪಟ್ಟಿಗಳು, ಬರೆಯಲು ಕೊಡುವ 5500 ಉತ್ತರ ಪತ್ರಿಕೆಗಳು, ವಿದ್ಯಾರ್ಥಿಗಳನ್ನು ಅಡ್ಮಿಷನ್ ಮಾಡಿಕೊಂಡಿರುವ 25 ಅಡ್ಮಿಷನ್ ರಿಜಿಸ್ಟರ್‍ಗಳು ನಕಲಿ ಮಾಕ್ಸ್ ಕಾರ್ಡ್‍ಗಳನ್ನು ಪ್ರಿಂಟ್ ತೆಗೆಯಲು ಬಳಸಿದ್ದ ಕಲರ್ ಪ್ರಿಂಟರ್ ಕಂ ಜೆರಾಕ್ಸ್ ಮಷಿನ್ ಹಾಗೂ 4 ಲ್ಯಾಪ್ ಟಾಪ್‍ಗನ್ನು ವಶಪಡಿಸಿಕೊಳ್ಳಲಾಗಿದೆ.

ದಾಳಿ ವೇಳೆ ಮೀರತ್ ಯೂನಿವರ್ಸಿಟಿ, ಚರಣ್ ಸಿಂಗ್ ಯೂನಿವರ್ಸಿಟಿಗೆ ಸಂಬಂಧಿಸಿದ ಬಿಎ ಪದವಿಯ 3 ನಕಲಿ ಅಂಕ ಪಟ್ಟಿಗಳ ಮೈಗ್ರೇಷನ್ ಸರ್ಟಿಫಿಕೇಟ್, ಕಾನ್ವಕೇಷನ್ ಸರ್ಟಿಫಿಕೇಟ್, ಕೆಐಒಎಸ್ ಹುಬ್ಬಳ್ಳಿ ಸಂಸ್ಥೆಗೆ ಸೇರಿದ ಒಟ್ಟು 14 ಪಿಯು ಮತ್ತು ಎಸ್‍ಎಸ್‍ಲ್ ಸಿ ತತ್ಸಮಾನ ತರಗತಿ ನಕಲಿ ಅಂಕ ಪಟ್ಟಿಗಳು ಸೇರಿದಂತೆ ವಿವಿಧ ವಿಶ್ವವಿದ್ಯಾನಿಲಯಗಳಿಗೆ ಸೇರಿದ 4 ನಕಲಿ ಅಂಕ ಪಟ್ಟಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳು ನೂರಾರು ವಿದ್ಯಾರ್ಥಿಗಳಿಗೆ ಕೆಐಒಎಸ್, ಹುಬ್ಬಳ್ಳಿ ಸಂಸ್ಥೆಯ ಸಂಸ್ಥಾಪಕರಿಂದ ಅಂಕ ಪಟ್ಟಿಗಳನ್ನು ಪಡೆದುಕೊಂಡಿರಿವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here