ಬೆಂಗಳೂರು: ರಾಜ್ಯ ಸರಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳ ಮುಖ್ಯ ಮತ್ತು ಉಪರಸ್ತೆಗಳ ಡಾಂಬರೀಕರಣ ಕಾಮಗಾರಿಗಳಿಗೆ 1241.57 ಕೋಟಿ ರೂ.ಗಳ ಕಾರ್ಯ ಯೋಜನೆಗೆ ಸೋಮವಾರ ಅನುಮೋದನೆ ನೀಡಿದೆ.
ಇದರಲ್ಲಿ, ಐದು ನಗರ ಪಾಲಿಕೆಗಳ ವ್ಯಾಪ್ತಿಯ ವಾರ್ಡ್ ಅಭಿವೃದ್ಧಿ, ಚರಂಡಿ ಅಭಿವೃದ್ಧಿ, ನಿರ್ವಹಣೆ ಮತ್ತು ಮೂಲಸೌಕರ್ಯ ಹೆಚ್ಚಿಸುವುದಕ್ಕಾಗಿ 900 ಕೋಟಿ ರೂ.ಗಳ ಮತ್ತೊಂದು ಪ್ರತ್ಯೇಕ ಕಾರ್ಯ ಯೋಜನೆಗೂ ಅನುಮೋದನೆ ದೊರೆತಿದೆ.
ಈ ಕಾಮಗಾರಿಗಳನ್ನು 10 ಕೋಟಿ ರೂ.ಗಳ್ಲ ಕಡಿಮೆ ಆಗದಂತೆ ಪ್ಯಾಕೇಜ್ ಮಾಡಿ, ಕೆ.ಟಿ.ಪಿ.ಪಿ. ಕಾಯ್ದೆ-1999, ಕೆ.ಟಿ.ಪಿ.ಪಿ ನಿಯಮಗಳು-2000 ಹಾಗೂ ಕೆಪಿಪಿಪಿ ಪೋರ್ಟಲ್ ಮೂಲಕ ಅಲ್ಪಾವಧಿ ಟೆಂಡರ್ ಮೂಲಕ ಚಾಲನೆ ಮಾಡಬೇಕೆಂದು ನಿರ್ದೇಶಿತವಾಗಿದೆ.
ಕಾಮಗಾರಿಗಳ ಅನುಷ್ಠಾನದಲ್ಲಿ ತಾಂತ್ರಿಕ ಅಥವಾ ಅನಿವಾರ್ಯ ಕಾರಣಗಳಿಂದ ಬದಲಾವಣೆಗಳಿಗೆ ಮುಖ್ಯ ಆಯುಕ್ತರ ಶಿಫಾರಸು ಮತ್ತು ಇಲಾಖಾ ಸಚಿವರ ಅನುಮೋದನೆ ಅಗತ್ಯವಿದ್ದು, ಈ ಕ್ರಮದಿಂದ ಕಾರ್ಯತತ್ಪರತೆಯನ್ನು ನಿರ್ವಹಿಸಲು ನಿರ್ಧರಿಸಲಾಗಿದೆ.
