ಬೆಂಗಳೂರು:
ರಾಜ್ಯಾದ್ಯಂತ ಇಂದಿನಿಂದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿವೆ.
ವಿದ್ಯಾರ್ಥಿಗಳು ಉತ್ಸಾಹ ಮತ್ತು ಆತಂಕದಿಂದಲೇ ತರಗತಿಗಳಿಗೆ ಹಾಜರಾಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.
ಬೆಳಗ್ಗೆ 10 ಗಂಟೆಗೆ ತರಗತಿ ಆರಂಭವಾಗಿದ್ದು, ಮಧ್ಯಾಹ್ನ 12.30ರವರೆಗೆ ತರಗತಿಗಳು ನಡೆಯಲಿವೆ.
ರಾಜ್ಯದಲ್ಲಿ ಒಟ್ಟು 16,850 ಶಾಲೆಗಳಲ್ಲಿ ಎಸ್ ಎಸ್ಎಲ್ ಸಿ ತರಗತಿಗಳು ಆರಂಭವಾಗಿವೆ. 5,775 ಸರ್ಕಾರಿ ಶಾಲೆಗಳು, 11,075 ಖಾಸಗಿ ಶಾಲೆಗಳಿದ್ದು, 16,850 ಶಾಲೆಯ ಶಿಕ್ಷಕರಿಗೂ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಶಾಲೆಗಳಲ್ಲಿ 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಶೀಲ್ಡ್ ಧರಿಸುವುದು ಕಡ್ಡಾಯವಾಗಿದೆ. ನಿನ್ನೆ ಕೆಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಕೂಡ ಕೆಲವು ಶಾಲೆಗಳಿಗೆ ಭೇಟಿ ನೀಡಲಿದ್ದಾರೆ.
ರಾಜ್ಯಾದ್ಯಂತ ಒಟ್ಟು 4481 ಕಾಲೇಜುಗಳಲ್ಲಿ ಪಿಯುಸಿ ತರಗತಿಗಳು ಆರಂಭಗೊಂಡಿವೆ. 1231 ಸರ್ಕಾರಿ, 750 ಅನುದಾನಿತ ಖಾಸಗಿ ಶಾಲೆಗಳು, 2,500 ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ತರಗತಿಗಳು ಆರಂಭಗೊಂಡಿವೆ. ಒಂದು ಬೆಂಚ್ ನಿಂದ ಮತ್ತೊಂದು ಬೆಂಚ್ ಗೆ 2 ಅಡಿ ಅಂತರವಿರಿಸಲಾಗಿದೆ. ಒಂದು ರೂಮಿನಲ್ಲಿ 15 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.
ಸ್ಯಾನಿಟೈಸರ್ ಬಳಕೆ ಕಡ್ಡಾಯಮಾಡಲಾಗಿದೆ. ಪ್ರತಿ ದಿನ 45 ನಿಮಿಷಗಳ ನಾಲ್ಕು ತರಗತಿಗಳು ನಡೆಯಲಿವೆ. UNI